HEALTH TIPS

ಜಯನಗರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಬದಿಯಡ್ಕ: ಮಾರ್ಪನಡ್ಕ ಜಯನಗರದ ಶ್ರೀ ಮಾತಾ ನೃತ್ಯ ಭಜನಾ ಸಂಘ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕಾಸರಗೋಡು ಇವರ ನೇತೃತ್ವದಲ್ಲಿ  ಉಚಿತ ನೇತ್ರ ತಪಾಸಣಾ ಶಿಬಿರ ಜಯನಗರ ಪದ್ಮಶ್ರೀ ಹಾಲ್ ನಲ್ಲಿ ಜರಗಿತು. 

ಶ್ರೀ ಮಾತಾ ನೃತ್ಯ ಭಜನಾ ಸಂಘದ ಅಧ್ಯಕ್ಷೆ ಸುಪ್ರಿತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಾದ್ ನೇತ್ರಾಲಯದ ವೈದ್ಯ ಡಾ.ಸಾಗರ್ ಅವರು ದೀಪ ಬೆಳಗಿಸಿ ನೆರವೇರಿಸಿದರು. ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಮಂಜೇಶ್ವರ ಮುಖ್ಯ ಅತಥಿಯಾಗಿ ಭಾಗವಹಿಸಿದ್ದರು. ಸಂಘದ ಸದಸ್ಯರಾದ ಸುರೇಶ್ ಬಿ.ಕೆ, ಹರಿಪ್ರಸಾದ್, ಶುಭಲಕ್ಷ್ಮಿ, ಪ್ರಿಯ, ಶಕೀಲ, ಪೂರ್ಣಿಮ ಉಪಸ್ಥಿತರಿದ್ದರು. ಸಂಘದ ಸದಸ್ಯೆ ರವಿಕಲ ಸ್ವಾಗತಿಸಿ, ಕೃಷ್ಣ ನಾಯಕ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೂರಾರು ಜನ ಈ ಶಿಬಿರದ ಸದುಪಯೋಗ ಪಡೆದುಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries