ಪಾಲಕ್ಕಾಡ್: ಪಾಲಕ್ಕಾಡ್ ರ‍್ಯಾಪರ್ ವೇಡನ್ ಅವರ ಸಂಗೀತ ಕಾರ್ಯಕ್ರಮದ ಆಯೋಜಕರು ಗಂಭೀರ ಪ್ರಮಾದ ಎಸಗಿದ್ದಾರೆ ಎಂಬ ಆರೋಪಗಳಿವೆ.
ಸಂಸ್ಕೃತಿ ಇಲಾಖೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅನಿಯಂತ್ರಿತ ಜನಸಮೂಹ ಸೇರಿದ ನಂತರ ನಿರ್ಬಂಧಗಳನ್ನು ತೆಗೆದುಹಾಕಲಾಯಿತು.ಈ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ ಸುಮಾರು 15 ಜನರು ಗಾಯಗೊಂಡರು. ಮೊನ್ನೆ ಮಧ್ಯಾಹ್ನದ ವೇಳೆಗೆ ಕೋಟೆಯ ಆವರಣವು ಅದಾಗಲೇ ಜನರಿಂದ ತುಂಬಿ ಹೋಗಿತ್ತು. ಜನಸಂದಣಿ ನಿಯಂತ್ರಣ ತಪ್ಪುತ್ತಿದ್ದಂತೆ, ವೇಡನ್ ಆಗಮನ ವಿಳಂಬವಾಯಿತು. 6 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ 8 ಗಂಟೆಗೆ ಆಗಮಿಸಿದ್ದ. ವೇಡನ್ ಮೊದಲ ಹಾಡನ್ನು ಹಾಡಿದಾಗ ಜನರು ಉತ್ಸುಕನಾಗಿದ್ದರು. ಇದಾದ ನಂತರ, ಪ್ರೇಕ್ಷಕರು ಪರಸ್ಪರ ತಳ್ಳಾಡಲು ಪ್ರಾರಂಭಿಸಿದರು. ಜನಸಂದಣಿ ಹೆಚ್ಚಾದಂತೆ ಬ್ಯಾರಿಕೇಡ್‌ಗಳು ಕುಸಿದು ಬಿದ್ದವು. ಕಾರ್ಯಕ್ರಮವನ್ನು ಒಂದಕ್ಕಿಂತ ಹೆಚ್ಚು ಬಾರಿ ನಿಲ್ಲಿಸಲಾಯಿತು. ಸಂಘಟಕರು ಮತ್ತು ಪ್ರೇಕ್ಷಕರ ಮೇಲೆ ಪೊಲೀಸರು ಹಲವಾರು ಬಾರಿ ಲಾಠಿ ಪ್ರಹಾರ ನಡೆಸಿದರು, ಇದು ಘರ್ಷಣೆಗೆ ಕಾರಣವಾಯಿತು. ಕೇವಲ 2,000 ಜನರಿಗೆ ಮಾತ್ರ ಸ್ಥಳಾವಕಾಶವಿರುವ ಕ್ರೀಡಾಂಗಣಕ್ಕೆ ಹತ್ತು ಸಾವಿರಕ್ಕೂ ಮಿಕ್ಕಿದ ಜನರು ಆಗಮಿಸಿ ಗೊಂದಲಕ್ಕೆ ಕಾರಣವಾಯಿತು.
ಜನರನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಒದಗಿಸುವಲ್ಲಿ ವಿಫಲತೆ ಮತ್ತು ಉಚಿತ ಪ್ರವೇಶವನ್ನು ಒದಗಿಸಿದುದು ವೈಫಲ್ಯಗಳಾಗಿವೆ ಎಂಬ ಆರೋಪವಿದೆ. ಸ್ಥಳದಲ್ಲಿ ಸಾಕಷ್ಟು ಪೊಲೀಸರು ಇದ್ದಿರಲಿಲ್ಲ. ಜನಸಂದಣಿ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ವೇಡನ್ ಕೇವಲ ಮೂರು ಹಾಡುಗಳನ್ನು ಹಾಡಿ ವೇದಿಕೆಯಿಂದ ಇಳಿದು ತೆರಳಬೇಕಾಯಿತು.




