ಮುಳ್ಳೇರಿಯ: ಅಡೂರು ಜಿಎಚ್‍ಎಸ್‍ಎಸ್‍ನಲ್ಲಿ ಪ್ರೌಢಶಾಲಾ ಮಲಯಾಳಂ ಮಾಧ್ಯಮದಲ್ಲಿ ಫಿಸಿಕಲ್ ಸೈನ್ಸ್, ಕನ್ನಡ ಮಾಧ್ಯಮದಲ್ಲಿ ಫಿಸಿಕಲ್ ಸೈನ್ಸ್, ಇಂಗ್ಲೀಷ್, ಚಿತ್ರಕಲಾ ಶಿಕ್ಷಕ, ಯುಪಿಎಸ್‍ಟಿ ಮಲಯಾಳಂ, ಎಲ್‍ಪಿಎಸ್‍ಟಿ ಮಲಯಾಳಂ, ಯುಪಿಎಸ್‍ಟಿ ಅರೇಬಿಕ್, ಎಲ್‍ಪಿಎಸ್‍ಟಿ ಅರೇಬಿಕ್, ಶಿಕ್ಷಕರ ಹುದ್ದೆಯ ದಿನಕೂಲಿ ವೇತನದ ಅಡಿಯಲ್ಲಿ ನೇಮಕಾತಿಗಾಗಿ ಮೇ 28 ರಂದು ಬೆಳಿಗ್ಗೆ 10 ರಿಂದ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಗರಾಗಲು ಸೂಚಿಸಲಾಗಿದೆ. ಮಾಹಿತಿಗೆ ದೂರವಾಣಿ-8547185292. ಸಂಖ್ಯೆಗೆ ವಿಚಾರಿಸಬಹುದಾಗಿದೆ.
.....................................................................................................................................................................
ಅಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ
ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೈಸ್ಕೂಲ್ ವಿಭಾಗ ಸಂಸ್ಕøತ -1 (ಬಿ.ಎ/ ಎಂ.ಎ., ಬಿ.ಎಡ್), ಮಲಯಾಳಂ-1(ಪಾರ್ಟ್‍ಟೈಂ-ಬಿ.ಎ/ ಎಂ.ಎ., ಬಿ.ಎಡ್)ಹುದ್ದೆಗಳಿಗೆ ಸಂದರ್ಶನ ಮೇ.27 ರ ಮಂಗಳವಾರ ಬೆಳಿಗ್ಗೆ 10.ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿದೆ. ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಶಾಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುವರು. ಹೆಚ್ಚಿನ ಮಾಹಿತಿಗೆ ಕಛೇರಿಯ ದೂರವಾಣಿ ಸಂಖ್ಯೆಗೆ (9037342472) ಸಂಪರ್ಕಿಸಬಹುದು.
........................................................................................................................................................................................................................................
ಮಂಗಲ್ಪಾಡಿ ಶಾಲೆಯಲ್ಲಿ ಶಿಕ್ಷಕರ ನೇಮಕಾತಿಗಾಗಿ ಸಂದರ್ಶನ
ಉಪ್ಪಳ: ಮಂಗಲ್ಪಾಡಿ ಸರ್ಕಾರಿ ಹ್ಯಯರ್ ಸೆಕೆಂಡರಿ ಶಾಲೆಯಲ್ಲಿ ತೆರವಾಗಿರುವ ಅಧ್ಯಾಪಕರ ಹುದ್ದೆಗೆ ತಾತ್ಕಾಲಿಕ ನೇಮಕಾತಿ ಮೇ 26ರಂದು ನಡೆಯಲಿರುವುದು. ಸೋಶಿಯಲ್ ಸಯನ್ಸ್ ಮತ್ತು ಫಿಸಿಕಲ್ ಸಯನ್ಸ್ ಕನ್ನಡ, ಫಿಸಿಕಲ್ ಸಯನ್ಸ್ ಮಲಯಾಳ, ಯುಪಿಎಸ್‍ಟಿ ಕನ್ನಡ, ಮಲಯಾಳ, ಉರ್ದು, ಹಾಗೂ ಅರಬಿಕ್ ವಿಭಾಗಕ್ಕೆ ಈ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳು ಅಸಲಿ ದಾಖಲೆಗಳೊಂದಿಗೆ ಅಂದು ಬೆಳಗ್ಗೆ 11ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
....................................................................................................................................................................................................................................
29 ರಂದು ಪೈವಳಿಕೆ ಕಾಯರ್‍ಕಟ್ಟೆ ಜಿಎಚ್‍ಎಸ್‍ಎಸ್‍ನಲ್ಲಿ ಶಿಕ್ಷಕರ ನೇಮಕಾತಿಗೆ ಸಂದರ್ಶನ
ಉಪ್ಪಳ: ಪೈವಳಿಕೆ ಕಾಯರ್‍ಕಟ್ಟೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನವೇತನ ಆಧಾರದಲ್ಲಿ ಶಿಕ್ಷಕರ ನೇಮಕಾತಿಗಾಗಿ ಮೇ 29ರಂದು ಸಂದರ್ಶನ ನಡೆಯಲಿರುವುದು. ಎಚ್‍ಎಸ್‍ಎಸ್‍ಟಿ ಇಂಗ್ಲಿಷ್ ಸೀನಿಯರ್, ಹಿಂದಿ ಜೂನಿಯರ್, ಹಿಸ್ಟರಿ ಸೀನಿಯರ್, ಪೊಲಿಟಿಕಲ್ ಸಯನ್ಸ್ ಸೀನಿಯರ್ ಹಾಗೂ ಜೂನಿಯರ್, ಇಕನಾಮಿಕ್ಸ್ ಸೀನಿಯರ್, ಸೋಶಿಯಲ್ ವರ್ಕ್ ಸೀನಿಯರ್ ಹಾಗೂ ಕಾಮರ್ಸ್ ಸೀನಿಯರ್ ವಿಭಾಗದ ಶಿಕ್ಷಕರ ನೇಮಕಾತಿ ನಡೆಯುವುದು. ಅಬ್ಯರ್ಥಿಗಳು ಅಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಜರಾಗಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(9961425816)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
.......................................................................................................................................................
ಸೂರಂಬೈಲು ಶಾಲೆಯಲ್ಲಿ ಸಂದರ್ಶನ
ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಎಚ್ ಎಸ್ ಟಿ ಹಿಂದಿ, ಎಚ್ ಎಸ್ ಟಿ ಸಂಸ್ಕøತ, ಎಚ್ ಎಸ್ ಟಿ ಗಣಿತ(ಮಲಯಾಳ ಮಾಧ್ಯಮ), ಎಚ್ ಎಸ್ ಟಿ ನೇಚುರಲ್ ಸಯನ್ಸ್(ಕನ್ನಡ ಮಾಧ್ಯಮ), ಎಚ್ ಎಸ್ ಟಿ ಇಂಗ್ಲೀಷ್, ಎಚ್ ಎಸ್ ಟಿ ಅರೆಬಿಕ್, ಯುಪಿಎಸ್ ಟಿ ಮಲಯಾಳ, ಎಲ್ ಪಿ ಎಸ್ ಟಿ ಕನ್ನಡ, ಎಲ್ ಪಿ ಎಸ್ ಟಿ ಅರೆಬಿಕ್ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ 29-05-2025 ಗುರುವಾರ ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಶಾಲಾ ಕಛೇರಿಯಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ - 8921073496





