ಬದಿಯಡ್ಕ- ಸಾಮಾನ್ಯವಾಗಿ ಮೇ ಪ್ಲವರ್ ಎಂದು ಕರೆಯಲ್ಪಡುವ ಸುಂದರ ಕೆಂಬಣ್ಣದ ಪುಷ್ಪ ಮೇ ತಿಂಗಳಲ್ಲಿ ಮಾತ್ರ ಕಾಣಬರುವ ವಿಶೇಷ ಪುಷ್ಪ ಪ್ರಬೇಧವಾಗಿದೆ. ಡೆಲೋನಿಕ್ಸ್ ರೆಜಿಯಾ ಎಂಬ ಕುಟುಂಬಕ್ಕೆ ಸೇರಿದ ಫ್ಯಾಬೇಸಿ ಕುಟುಂಬದ ಒಂದು ಜಾತಿಯಾಗಿದ್ದು, ಸೀಸಲ್ಪಿನಿಯೊಯಿಡೆಯೇ ಉಪಕುಟುಂಬವಾಗಿದೆ ಮೇ ಪ್ಲವರ್. ಆದರೆ ಹವಾಮಾನ ವೈಪರೀತ್ಯಕ್ಕೆ ಸೂಚನೆಯೆಂಬಂತೆ ಈ ಪುಷ್ಪ ಏಪ್ರಿಲ್ ಮಧ್ಯದಲ್ಲೇ ಹೂಬಿಟ್ಟಿರುವುಉದ ಕಳವಳ ಮೂಡಿಸಿದೆ.
ಬರ, ವಾತಾವರಣದಲ್ಲಿ ಉಪ್ಪಿನಂಶದ ಆಧಿಕ್ಯವನ್ನು ಸಹಿಸುವ ಶಕ್ತಿ ಈ ಹೂವಿನಲ್ಲಿರುವುದು ವಿಶೇಷ. 22 ರಿಂದ 35 ಡಿಗ್ರಿ ಉಷ್ಣತಾಮಾನದಲ್ಲಿ ಹುಲುಸಾಗಿ ಬೆಳೆಯುವ ಈ ಪುಷ್ಪ ಪ್ರಬೇಧ ಬೇಸಿಗೆಯ ಕೊನೆಯ ತಿಂಗಳಾದ ಮೇ ಯಲ್ಲಿ ಅರಳಿ ಕಂಗೊಳಿಸುವುದರಿಂ?ದ ಸ್ಥಳೀಯವಾಗಿ ಮೇ ಪ್ಲವರ್ ಎಂದೇ ಪ್ರಸಿದ್ದಿಪಡೆದಿದೆ.
ಇದೀಗ ವಾಡಿಕೆಗಿಂತ ಮೊದಲೇ ಅತ್ಯಷ್ಣ ಅನುಭವ ಪಟ್ಟಿರುವುದರಿಂದ ಈ ಪುಷ್ಪವೂ ಮೇ ತಿಂಗಳಿಗಿಂತ ಮುಂಚೆಯೇ ಅರಳಿ ನಿಂತಿದೆ. ಅಲ್ಲಲ್ಲಿ ಅಲ್ಪ ಪ್ರಮಾಣದ ಬೇಸಿಗೆ ಮಳೆಯಾಗುತ್ತಿದ್ದರೂ ಹಗಲಿನ ಉಷ್ಣತೆಯಲ್ಲಿ ಯಾವುದೇ ಕಡಿತವಿಲ್ಗಲದೆ ಏರುಗತಿಯಲ್ಲಿ ಬಿಸಿಲಿನ ಝಳ ಮುಂದುವರಿದಿದೆ. ಹಲವೆಡೆ ಕುಡಿ ನೀರಿನ ಲಭ್ಯತೆ ಕುಸಿಯತೊಡಗಿದ್ದು, ಮೇ ಮೊದಲ ವಾರ ಗರಿಷ್ಠ ಮಳೆಯಾಗದಿದ್ದರೆ ಜಲಕ್ಷಾಮ ತಲೆದೋರುವ ಭೀತಿಯಿದೆ. ಜೊತೆಗೆ, ತೀವ್ರ ಶುಷ್ಕ ವಾತಾವರಣದಿಂದ ಜನಸಾಮಾನ್ಯರಲ್ಲಿ ತೀವ್ರ ಬವಳಿಕೆ, ನಿತ್ರಾಣ, ಚರ್ಮದ ಕಾಯಿಲೆಗಳು ಬಾಧಿಸುವ ಸಾಧ್ಯತೆ ಇದೆ.




.jpg)
.jpg)
.jpg)
