ತಿರುವನಂತಪುರಂ: ಮೇಜರ್ ಜನರಲ್ ಲಿಸಮ್ಮ ಪಿ.ವಿ. ನವದೆಹಲಿಯಲ್ಲಿ ಮಿಲಿಟರಿ ನರ್ಸಿಂಗ್ ಸೇವೆಯ (ಎಂ.ಎನ್.ಎಸ್.) ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದು ಇಂದು ಅಧಿಕಾರ ವಹಿಸಿಕೊಂಡರು. ಅವರು ಪ್ರಸ್ತುತ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ (ಸಂಶೋಧನೆ ಮತ್ತು ಉಲ್ಲೇಖ) ಪ್ರಧಾನ ಮೇಟ್ರನ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ನಿವೃತ್ತ ಮೇಜರ್ ಜನರಲ್ ಶೀನಾ ಪಿ.ಡಿ. ಅವರ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು. ಮೇಜರ್ ಜನರಲ್ ಲಿಸಮ್ಮಾ ಪಿ.ವಿ. ಕೇರಳದ ಕೊಲ್ಲಂ ಜಿಲ್ಲೆಯವರು. ಅವರು ಜಲಂಧರ್‍ನ ಮಿಲಿಟರಿ ಆಸ್ಪತ್ರೆಯ ನರ್ಸಿಂಗ್ ಶಾಲೆಯ ಹಳೆಯ ವಿದ್ಯಾರ್ಥಿನಿ.
1986 ರಲ್ಲಿ, ನಿಯೋಜನೆಗೊಂಡ ನಂತರ, ಜನರಲ್ ಆಫೀಸರ್ ಕಲೆ ಮತ್ತು ಕಾನೂನು ಪದವಿ ಮತ್ತು ಆಸ್ಪತ್ರೆ ಆಡಳಿತದಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಅಮೆರಿಕದಲ್ಲಿ ಪಡೆದರು. ಅವರ ನರ್ಸಿಂಗ್ ವೃತ್ತಿಜೀವನದ ಜೊತೆಗೆ, ಪ್ರಿನ್ಸಿಪಾಲ್ ಕಾಲೇಜ್ ಆಫ್ ನಸಿರ್ಂಗ್, ಕಮಾಂಡ್ ಆಸ್ಪತ್ರೆ ಏರ್ ಫೆÇೀರ್ಸ್ (ಬೆಂಗಳೂರು); ಅವರು ಕಮಾಂಡ್ ಆಸ್ಪತ್ರೆ (ಪೂರ್ವ ಕಮಾಂಡ್), ಬ್ರಿಗೇಡಿಯರ್ ಎಂಎನ್‍ಎಸ್ ಪ್ರಧಾನ ಕಚೇರಿ (ಪೂರ್ವ ಕಮಾಂಡ್) ಮತ್ತು ರಕ್ಷಣಾ ಸಚಿವಾಲಯದ ಸಮಗ್ರ ಪ್ರಧಾನ ಕಚೇರಿಯಾದ ಬ್ರಿಗೇಡಿಯರ್ ಎಂಎನ್‍ಎಸ್ (ಆಡಳಿತ) ಮುಂತಾದ ಹುದ್ದೆಗಳನ್ನು ಅಲಂಕರಿಸಿದ್ದಾರೆ.





