ಉಪ್ಪಳ: ಕಾಶ್ಮೀರ ಹುತಾತ್ಮರಿಗೆ ನುಡಿ ನಮನ ಹಾಗೂ ವಿರಾಟ್ ಹಿಂದೂ ಜನಜಾಗೃತಿ ಸಮಾವೇಶ ಮೇ.4 ರಂದು ಭಾನುವಾರ ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಐಲ ಮೈದಾನದಲ್ಲಿ ಸಂಜೆ 4 ರಿಂದ ಜರಗಲಿರುವುದು.
ಶ್ರೀ ಮಜ್ಜಗದ್ಗುರು ಎಡನೀರು ಮಠ ಹಾಗೂ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಇದರ ಸಂಯುಕ್ತ ಆಶ್ರಯದಲ್ಲಿ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾವೇಶದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾಶಿವ ಶೆಟ್ಟಿ ಕುಳೂರು ಕನ್ಯಾನ ವಹಿಸಲಿದ್ದು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೇರಳ ತಮಿಳುನಾಡು ಸಂಯೋಜಕ ಜಿಜೇಶ್ ಪಟ್ಟೇರಿ(ಕನ್ನಡ) ಹಾಗೂ ರಂಗಾಯಣದ ನಿಕಟಪೂರ್ವ ನಿರ್ದೇಶಕ, ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಕಾರ್ಯಪ್ಪ(ಮಲೆಯಾಳಂ) ದಿಕ್ಕೂಚಿ ಭಾಷಣ ಮಾಡುವರು. ಎಡನೀರು ಹಾಗೂ ಕೊಂಡೆವೂರು ಯತಿದ್ವಯರು ಆಶೀರ್ವಚನ ನೀಡುವರು. ವಿರಾಟ್ ಹಿಂದೂ ಜಾಗೃತಿ ಸಮಾವೇಶದಲ್ಲಿ ಹಿಂದೂ ಭಾಂದವರು ಭಾಗವಹಿಸಿ ಯಶಸ್ವಿಗೆ ಸಕರಿಸಬೇಕಾಗಿ ವಿನಂತಿಸಲಾಗಿದೆ.





