ಎರ್ನಾಕುಳಂ: ಹಣಕಾಸು ವಂಚನೆ ಪ್ರಕರಣದಲ್ಲಿ ಮಂಜುಮ್ಮಲ್ ಬಾಯ್ಸ್ ನಿರ್ಮಾಪಕರ ವಿರುದ್ಧದ ತನಿಖೆ ಮುಂದುವರಿಯಲಿದೆ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಟ ಮತ್ತು ನಿರ್ಮಾಪಕ ಸೌಬಿನ್ ಶಾಹಿರ್ ಸೇರಿದಂತೆ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ತನಿಖೆ ಮುಂದುವರಿಯಬಹುದು ಮತ್ತು ಈ ಹಂತದಲ್ಲಿ ಪ್ರಕರಣವನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಗಮನಸೆಳೆದಿದೆ.
ಚಿತ್ರ ನಿರ್ಮಾಣಕ್ಕಾಗಿ 7 ಕೋಟಿ ರೂಪಾಯಿ ಪಡೆದ ನಂತರ ಮೋಸ ಮಾಡಲಾಗಿದೆ ಎಂದು ಆಲಪ್ಪುಳ ಮೂಲದ ವ್ಯಕ್ತಿಯೊಬ್ಬ ನೀಡಿದ ದೂರಿನ ಆಧಾರದ ಮೇಲೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಣವನ್ನು ತೆಗೆದುಕೊಂಡ ನಂತರ ಹೂಡಿಕೆ ಮಾಡಿದ ಹಣವಾಗಲಿ ಅಥವಾ ಲಾಭವಾಗಲಿ ಪಾವತಿಯಾಗಿಲ್ಲ ಎಂಬುದು ದೂರು. ನಿರ್ಮಾಪಕರಾದ ಶಾನ್ ಆಂಟನಿ, ಸೌಬಿನ್ ಶಾಹಿರ್ ಮತ್ತು ಅವರ ತಂದೆ ಬಾಬು ಶಾಹಿರ್ ಅವರು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಾದ ಆಲಪ್ಪುಳ ಮೂಲದ ಹಮೀದ್ ಸಮಯಕ್ಕೆ ಸರಿಯಾಗಿ ಹಣ ಪಾವತಿಸದ ಕಾರಣ ಚಿತ್ರೀಕರಣ ವಿಳಂಬವಾಗಿ ನಷ್ಟವಾಯಿತು ಎಂದು ನಿರ್ಮಾಪಕರು ವಾದಿಸಿದರು. ನಂತರ, ಮರಡು ಪೋಲೀಸರು ನಡೆಸಿದ ತನಿಖೆಯಲ್ಲಿ ನಿರ್ಮಾಪಕರು ಹಮೀದ್‍ನನ್ನು ಉದ್ದೇಶಪೂರ್ವಕವಾಗಿ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಪೋಲೀಸರು ನ್ಯಾಯಾಲಯಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಇದು ನಿರ್ಮಾಪಕರಿಗೆ ಹಿನ್ನಡೆಯಾಗಿದೆ.






