ಕುಂಬಳೆ: ಅನ್ನಮಯ ಕೋಶದೊಳಗೊಂದು ಮನೋಮಯ ಕೋಶ, ಮನೋಮಯ ಕೋಶದೊಂದಿಗೆ ವಿಜ್ಞಾನಮಯ ಸೃಷ್ಟಿ ನಂತರ ಪ್ರಾಣಮಯ ಕೋಶ, ಈ ನಾಲ್ಕು ಕೋಶಗಳ ಸಾಧಕತ್ವವನ್ನು ಪಡೆದಾಗ ಸಿಗುವ ಆನಂದಮಯ ಕೋಶ. ಆನಂದಮಯ ಕೋಶಕ್ಕೆ ತಲುಪಿದಾಗ ಆತ್ಮಲಿಂಗದ ಪರಿಚಯವಾಗುತ್ತದೆ ಎಂದು ವಿಹಿಂಪ ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಕೋಟೇಶ್ವರ ತಿಳಿಸಿದರು.
ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.
ಶೂನ್ಯ, ಖಾಲಿ ಜಾಗೆಯೇ ಆನಂದಮಯ ಕೋಶ. ಆನಂದಮಯ ಕೋಶ ತಲುಪಲು ಸಾಧನೆ ಅಪಾರವಾಗಿ ಬೇಕು. ಮಕ್ಕಳಿಗೆ ಶೋಡಶ ಸಂಸ್ಕಾರಗಳನ್ನು ನೀಡಬೇಕು.ಆ ಸಂಸ್ಕಾರಗಳನ್ನು ನೀಡುತ್ತಾ ಬಂದ ಹಾಗೆ ಮಗುವಿಗೂ ಒಂದು ಸಂಸ್ಕಾರ ಸಿಗುತ್ತದೆ. ಸಂಸ್ಕಾರ ಎನ್ನುವುದು ಮಗು ದಾರಿ ತಪ್ಪದೇ ಇರುವಂತಹ ಬೇಲಿ ಎಂದು ಅವರು ಹೇಳಿದರು.
ದೇವರ ಅನುಗ್ರಹದ ಫಲವನ್ನು ನೋಡಿ ಅನುಭವಿಸಲು ಸಾಧ್ಯವಾಗದು. ಅದನ್ನು ಅನುಭವಿಸಿ ಅರಿಯಬೇಕು. ನಾವು ವಿಶ್ವಾಸ, ಭಕ್ತಿಯಿಂದ ಭಗವಂತನಲ್ಲಿ ಮೊರೆಯಿಟ್ಟರೆ ದೇವರ ಅನುಗ್ರಹವಾಗುವುದು ಎಂದು ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಭಾಷಣಗೈದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಹೇಳಿದರು.
ಕ್ಷೇತ್ರ ಆಡಳಿತ ಮೊಕ್ತೇಸರ ನ್ಯಾಯವಾದಿ ಐ.ಸುಬ್ಬಯ್ಯ ರೈ ಸಭೆಯ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಕುಸುಮೋದರ ಶೆಟ್ಟಿ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ರವೀಂದ್ರ ಆಳ್ವ ಕಿದೂರುಗುತ್ತು, ಸುಕುಮಾರ ಕುದ್ರೆಪಾಡಿ, ಡಾ. ಹರಿ ಕಿರಣ್ ಬಂಗೇರ, ಸುರೇಶ್ ಕೆ, ಕುಡಾಲುಗುತ್ತು ಗಣೇಶ್ ರೈ, ರಾಜ್ ಮೋಹನ್ ಶೆಟ್ಟಿ ಎಡ್ತರೆ, ಡಾ. ವಿಷ್ಣು ಪ್ರಸಾದ್ ಬರೆಕೆರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಅಧಿಕಾರಿ ಮಹಾಲಿಂಗೇಶ್ವರಯ್ಯ, ಕೋಳಾರು ಸತೀಶ್ಚಂದ್ರ ಭಂಡಾರಿ, ಧರ್ಮಪಾಲ ಭಂಡಾರಿ, ವಸಂತ ಪಂಡಿತ್ ಗುಂಪೆ, ಅಶೋಕ್ ಭಂಡಾರಿ ಕುಡಾಲುಗುತ್ತು, ನ್ಯಾಯವಾದಿ ಉದಯಕುಮಾರ್ ಗಟ್ಟಿ, ಡಾ ಹರೀಶ್ ಬೊಟ್ಟಾರಿ, ಸುಕೇಶ್ ಭಂಡಾರಿ ಕಿದೂರು, ಬಿಪಿ ಶೇಣಿ, ನಾರಾಯಣ ಮವ್ವಾರು ಉಪಸ್ಥಿತರಿದ್ದರು. ಜ್ಯೋತಿಷ್ಯ ರತ್ನ ವಳಕುಂಜ ವೆಂಕಟರಮಣ ಭಟ್, ವಾಸ್ತುಶಿಲ್ಪಿ ಲಕ್ಷ್ಮಿ ವೆಂಕಟ ಕೃಷ್ಣ ಭಟ್ ಮುನಿಯಂಗಳ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ಅಡಿಗ, ರಾಧಾಕೃಷ್ಣ ಪುತ್ತೂರಾಯ ಇವರಿಗೆ ಗೌರವಾರ್ಪಣೆ ನಡೆಸಲಾಯಿತು.




.jpg)
