HEALTH TIPS

ಗುರಿಯನ್ನು ತಲುಪಲು ಶ್ರೇಷ್ಠವಾದ ಪ್ರಯತ್ನ ಅಗತ್ಯ - ಮುಳ್ಳೇರಿಯ ಮಂಡಲದ ಜೀವನಬೋಧ ಶಿಬಿರವನ್ನು ಉದ್ಘಾಟಿಸಿ ಮಾಜಿ ಸೈನಿಕ ಹವಲ್ದಾರ್ ಅಚಲ ಎಂ.ಜಿ. ಅಭಿಪ್ರಾಯ

ಬದಿಯಡ್ಕ: ಸೇನೆಯಲ್ಲಿ ಅನೇಕ ವಿಭಾಗಗಳಿವೆ. ಪ್ರತಿಯೊಬ್ಬನಿಗೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಆದರೆ ಒಂದು ತಂಡದ ವ್ಯವಸ್ಥೆ ಇನ್ನೊಂದು ತಂಡಕ್ಕೆ ಗೊತ್ತಿರುವುದಿಲ್ಲ. ರಕ್ಷಣಾ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ. ನಿರ್ಧಿಷ್ಟವಾದ ಗುರಿಯನ್ನು ತಲುಪಲು ನಮ್ಮ ಶ್ರೇಷ್ಠ ಪ್ರಯತ್ನ ಇರಬೇಕು ಎಂದು ಮಾಜಿ ಸೈನಿಕ ಹವಲ್ದಾರ್ ಅಚಲ ಎಂ.ಜಿ.ಪುತ್ರಕಳ ಹೇಳಿದರು.

ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಜೀವನಬೋಧ 2025 ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 

ದೇಶಸೇವೆಯೆಂಬ ವಿಚಾರ ನಮ್ಮ ಮನದಲ್ಲಿ ಅಚಲವಾಗಿದ್ದರೆ ಯಾವುದೇ ಕಷ್ಟವನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗಲು ಸಾಧ್ಯವಿದೆ. ದೇಶಕ್ಕಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧರಾಗಿರಬೇಕು ಎಂದರು.

ಶಿಬಿರಾಧಿಕಾರಿ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಡಾ.ವೈ.ವಿ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಹಪ್ಪಳ ತಯಾರಿ : 

ಹಲಸಿನ ಕಾಯಿಯ ಹಪ್ಪಳ ತಯಾರಿಗೆ ಚಾಲನೆಯನ್ನು ನೀಡಲಾಯಿತು. ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಪ್ರಧಾನರಾದ ಈಶ್ವರಿ ಬೇರ್ಕಡವು ಹಪ್ಪಳ ತಯಾರಿಯ ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳು ಹಪ್ಪಳ ತಯಾರಿಸಿದರು. ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಊಟಕ್ಕೆ 5 ಬಗೆಯ ತಂಬುಳಿಗಳು, ಮಾವಿನಹಣ್ಣಿನ ಸಾರು, ಮೇಲೋಗರ, ಹಲಸಿನ ಕಾಯಿ ಪಲ್ಯ, ಮಜ್ಜಿಗೆಯನ್ನು ಮಕ್ಕಳಿಗೆ ಉಣಬಡಿಸಲಾಯಿತು. ಮಂಡಲ ವಿದ್ಯಾರ್ಥಿವಾಹಿನಿಯ ಶ್ಯಾಮಪ್ರಸಾದ ಕುಳಮರ್ವ ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries