ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಸೇನಾ ಪ್ರದೇಶದ ಫೋಟೊ ತೆಗೆದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ತ್ವೇಷಮಯ ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆ ದೇಶದ ಎಲ್ಲಾ ಸೇನಾ ಪ್ರದೇಶಗಳು ಬಿಗಿ ಕಣ್ಗಾವಲಿನಲ್ಲಿವೆ.
'ದಂಡು ವಲಯದ ಸೇನಾ ಪ್ರದೇಶಗಳ ಚಿತ್ರ ತೆಗೆದಯುತ್ತಿದ್ದ ಮೊಹಮ್ಮದ್ ಝುಬೇರ್ (32) ಹಾಗೂ ಮೊಹಮ್ಮದ್ ಇರ್ಫಾನ್ (22) ಎಂಬಿಬ್ಬರನ್ನು ಸೇನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ' ಎಂದು ಉದಯ್‌ಬನ್ ಬಗ್ರಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಯಾವುದೇ ದುರುದ್ದೇಶ ಇಲ್ಲದೇ, ಸಾಮಾನ್ಯವಾಗಿ ಫೋಟೊ ತೆಗೆದಿದ್ದೇವೆ ಎಂದು ಅವರು ವಿಚಾರಣೆ ವೇಳೆ ಹೇಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೇವೆ. ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.




