HEALTH TIPS

ಗೋಶಾಲೆಯಲ್ಲಿ ನೃತ್ಯ ರೂಪಕದಲ್ಲಿ ಸ್ವಾತಿ ತಿರುನಾಳ್ ಅವರ ಜೀವನ ಚರಿತ್ರೆ

ಮುಳ್ಳೇರಿಯ: ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಮುಂಬೈನ ಐಶ್ವರ್ಯಾ ಹರೀಶ್ ಅವರು ಸ್ವಾತಿ ತಿರುನಾಳ್ ಅವರ ಜೀವನ ಚರಿತ್ರೆಯನ್ನು ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು.

ಐಶ್ವರ್ಯಾ ಹರೀಶ್ ಸ್ವತಃ ಈ ಹಾಡನ್ನು ಬರೆದು ನಿರ್ದೇಶಿಸಿದರೆ, ಅವರ ಪತಿ ಹರೀಶ್ ಮುಂಬೆ` ಹಾಡನ್ನು ಹಾಡಿ ಸಂಗೀತ ಸಂಯೋಜಿಸಿದ್ದಾರೆ. ಅವರ ಮಗಳು ವರ್ಷಿಣಿ ಜತಿಯಲ್ಲಿ, ಪವನ್ ಮಾ`Àವ್ ಮೃದಂಗದಲ್ಲಿ ಮತ್ತು ಜಯರಾಮ್ ಬೆಂಗಳೂರು ಮೃದಂಗದಲ್ಲಿ ಸಹಕರಿಸಿದರು. ಅರ್ಜುನ್ ಶ್ಯಾಮಲಾ ಕಥೆ ನಿರೂಪಿಸಿದರು. ರಾಷ್ಟ್ರೀಯ ನೃತ್ಯೋತ್ಸವದ ಏಳನೇ ದಿನದಂದು ಎರ್ನಾಕುಲಂನ ಅಭಿರಾಮಿ ನವೀನ್, ಅತಿರಾ ಶಂಕರ್, ಮ`Àುರ್ ಸಹೋದರಿಯರಾದ ಸ್ಪೂರ್ತಿ ಮತ್ತು ಪ್ರೀತಿ, ಬೆಂಗಳೂರಿನ ಮಮತಾ ಪೆ` ಮತ್ತು ಶ್ರಾವ್ಯ, ಕಾಸರಗೋಡು ಜಿಲ್ಲೆಯ ಚೆ`ತ್ರಾ ಮತ್ತು ಅವರ ತಂಡ, ಮಾಳವಿಕಾ, ಋತುನಂದನ, ಮತ್ತು ಶ್ರುತಿ ಸಂಗೀತ, ವಾಗೆಯ ನೃತ್ಯ ಗೋವಿಯಸ್ ವಿದ್ಯಾಲಯದ ವಿದ್ಯಾರ್ಥಿನಿಯರು, ಜಿ. ಅನಘಾ ಮಿಹಿರ ಸಹೋದರಿಯರಾದ ದೇವಿಕಾ ಸಜೀವನ್ ಮತ್ತು ರಾಕಾ ಕಲ್ಲೂರಾಯ ಅವರು `Àರತನಾಟ್ಯ ಪ್ರದರ್ಶಿಸಿದರೆ, ಕ್ಷೇತ್ರ ಕಲಾ ಅಕಾಡೆಮಿ ಮಡೆ`ಕಾವು ಮೋಹಿನಿಯಾಟ್ಟಂ, ಮತ್ತು ಎರ್ನಾಕುಲಂನ ಅಂಜನಾ ಆನಂದ್ ಅವರು ಗೋಶಾಲಾ ನಂದಿ ಮಂಟಪದಲ್ಲಿ ಕೂಚುಪುಡಿ ಪ್ರದರ್ಶಿಸಿದರು. ಪರಂಪರಾ ವಿದ್ಯಾಪೀಠದಿಂದ ಜಿಲ್ಲಾ ನೃತ್ಯ ಶಿಕ್ಷಕಿ ರೆಗ್ಗಿ ಜಾನ್ ಮಾರ್ಟಿನ್ ಅವರನ್ನು ಸನ್ಮಾನಿಸಲಾಯಿತು. 

ಇಂದು(ಮೇ.8) ನೃತ್ಯೋತ್ಸವದಲ್ಲಿ - ಪ್ರತಿಭಾ ಕಿಣಿ, ಕಾರ್ತಿಕ್ ಮಣಿಕಾಂತನ್, ಶಾರ್ವರಿ ಮಾಯಾ, ದೇವಿಕಾ ಕೆ.ಎಂ., ಗುಜರಾತಿನ ದೇವಾಂಶಿ ಸೋಂಪುರ, ಖ್ಯಾತ ನರ್ತಕ ಪಾಶ್ರ್ವನಾಥ ಉಪಾಧ್ಯಾಯ ಮತ್ತು ನಾಯರ್ ಸಹೋದರಿಯರಿಂದ ಭರತನಾಟ್ಯ, ನಯನಾ ನಾರಾಯಣನ್, ಗಾಯತ್ರಿ ಗಿರಿಧರ್, ಮತ್ತು ಅಶ್ವತಿ ಕೃಷ್ಣ ಅವರು ಮೋಹಿನಿಯಾಟ್ಟಂ, ಶಮಾ ಮತ್ತು ಶಾರ್ವಿ ರಾಗೇಶ್, ಪರಮೇಶ್ವರಿ ರಾಗೇಶ್ ಕೂಚ್ಚಿಪುಡಿ  ನಡೆಸಿಕೊಟ್ಟರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries