HEALTH TIPS

ಏರ್‌ಟೆಲ್ ನಿಂದ ವಿಶ್ವದ ಮೊದಲ ವಂಚನೆ ಪತ್ತೆ ಪರಿಹಾರ

ಸ್ಪ್ಯಾಮ್ ವಿರುದ್ಧದ ತನ್ನ ಹೋರಾಟವನ್ನು ಮುಂದುವರೆಸುತ್ತಾ, ಏರ್‌ಟೆಲ್ ಇಂದು ಒಂದು ಅತ್ಯಾಧುನಿಕ ಪರಿಹಾರವನ್ನು ಅನಾವರಣಗೊಳಿಸಿದೆ. ಇದು ಇಮೇಲ್‌ಗಳು, ಬ್ರೌಸರ್‌ಗಳು, ವಾಟ್ಸ್‌ಆಪ್, ಟೆಲಿಗ್ರಾಮ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, SMSಗಳಂತಹ OTT ಆಪ್‌ಗಳು ಸೇರಿದಂತೆ ಎಲ್ಲ ಸಂನಾದನ ವೇದಿಕೆಗಳಲ್ಲಿ ದುರುದ್ದೇಶಪೂರಿತ ವೆಬ್‌ಸೈಟ್‌ಗಳನ್ನು ನೈಜ ಸಮಯದಲ್ಲಿ ಪತ್ತೆಹಚ್ಚಿ ನಿರ್ಬಂಧಿಸುತ್ತದೆ.

ಈ ಸುರಕ್ಷಿತ ಸೇವೆಯನ್ನು ಎಲ್ಲ ಏರ್‌ಟೆಲ್ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸ್ವಯಂಚಾಲಿತವಾಗಿ ಸಂಯೋಜಿಸಲಾಗುವುದು. ಗ್ರಾಹಕರು ಏರ್‌ಟೆಲ್‌ನ ಸುಧಾರಿತ ಭದ್ರತಾ ವ್ಯವಸ್ಥೆಯಿಂದ ದುರುದ್ದೇಶಪೂರಿತ ಎಂದು ಗುರುತಿಸಲ್ಪಟ್ಟ ವೆಬ್‌ಸೈಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ, ಪುಟ ಲೋಡ್ ಆಗದಂತೆ ನಿರ್ಬಂಧಿಸಲಾಗುತ್ತದೆ ಮತ್ತು ಗ್ರಾಹಕರನ್ನು ನಿರ್ಬಂಧದ ಕಾರಣವನ್ನು ವಿವರಿಸುವ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಡಿಜಿಟಲ್ ವೇದಿಕೆಗಳು ದೇಶಾದ್ಯಂತ ವ್ಯಾಪಕವಾಗಿ ಜನಪ್ರಿಯವಾಗುತ್ತಿರುವುದರಿಂದ ಆನ್‌ಲೈನ್ ವಂಚನೆಯ ಬೆದರಿಕೆ ದಿನೇ ದಿನೇ ಹೆಚ್ಚುತ್ತಿದೆ, ಇದು ಗ್ರಾಹಕರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಇಂತಹ ಬೆದರಿಕೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. OTP ವಂಚನೆಗಳು ಮತ್ತು ಮೋಸದ ಕರೆಗಳನ್ನು ಮೀರಿ ವಂಚನಾತ್ಮಕ ಯೋಜನೆಗಳು ವಿಕಾಸಗೊಂಡಿವೆ, ಇತ್ತೀಚಿನ ವರದಿಗಳ ಪ್ರಕಾರ ಲಕ್ಷಾಂತರ ವ್ಯಕ್ತಿಗಳು ದುರುದ್ದೇಶಪೂರಿತ ಆನ್‌ಲೈನ್ ವಂಚನೆಗಳಿಗೆ ಬಲಿಯಾಗಿದ್ದಾರೆ. ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಏರ್‌ಟೆಲ್ ಎಐ-ಚಾಲಿತ, ಬಹು-ಹಂತದ ಗುಪ್ತಚರ ವೇದಿಕೆಯನ್ನು ಜಾರಿಗೊಳಿಸಿದೆ, ಇದು ಗ್ರಾಹಕರನ್ನು ಎಲ್ಲ ರೀತಿಯ ವಂಚನೆಗಳು ಮತ್ತು ಮೋಸಗಳಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಎಲ್ಲ ವೇದಿಕೆಗಳಲ್ಲಿ ಡೊಮೇನ್ ಫಿಲ್ಟರಿಂಗ್ ನಡೆಸುವ ಮತ್ತು ಲಿಂಕ್‌ಗಳನ್ನು ಸಾಧನಗಳಲ್ಲಿ ನಿರ್ಬಂಧಿಸುವ ಅತ್ಯಾಧುನಿಕ ಬೆದರಿಕೆ ಪತ್ತೆ ವೇದಿಕೆಯನ್ನು ಪರಿಚಯಿಸುವ ಮೂಲಕ ಇದನ್ನು ಸಾಧಿಸಲು ಉದ್ದೇಶಿಸಿದೆ.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಭಾರತಿ ಏರ್‌ಟೆಲ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಟ್ಟಲ್, "ಕಳೆದ ಕೆಲವು ವರ್ಷಗಳಲ್ಲಿ, ಅನುಭವಿಗಳಿಂದ ಕೂಡಿದ ಕಳ್ಳರಿಂದ ಅನೇಕ ಗ್ರಾಹಕರು ತಮ್ಮ ಕಷ್ಟದಿಂದ ಗಳಿಸಿದ ಹಣವನ್ನು ಕಳೆದುಕೊಂಡಿರುವ ಹಲವು ಉದಾಹರಣೆಗಳು ನಮಗೆ ಕಂಡುಬಂದಿವೆ. ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಎಂಜಿನಿಯರ್‌ಗಳು ವಂಚನೆ ಪತ್ತೆ ಪರಿಹಾರವನ್ನು ಪರಿಚಯಿಸಿದ್ದಾರೆ. ಇದು ಗ್ರಾಹಕರಿಗೆ ಇಂಟರ್‌ನೆಟ್ ಬ್ರೌಸ್ ಮಾಡುವಾಗ ವಂಚನೆಯ ಚಿಂತೆಯಿಲ್ಲದೆ ಸಂಪೂರ್ಣ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ. ನಮ್ಮ ಎಐ-ಆಧಾರಿತ ಸಾಧನವು ಇಂಟರ್‌ನೆಟ್ ಟ್ರಾಫಿಕ್‌ನ್ನು ಸ್ಕ್ಯಾನ್ ಮಾಡುತ್ತದೆ, ಜಾಗತಿಕ ರೆಪೊಸಿಟರಿಗಳು ಮತ್ತು ನಮ್ಮ ಸ್ವಂತ ಬೆದರಿಕೆಯ ಕಾರಕಗಳ ಡೇಟಾಬೇಸ್‌ನೊಂದಿಗೆ ಪರಿಶೀಲಿಸುತ್ತದೆ ಮತ್ತು ದುರುದ್ದೇಶಪೂರಿತ ವೆಬ್‌ಸೈಟ್‌ಗಳನ್ನು ನೈಜ ಸಮಯದಲ್ಲಿ ನಿರ್ಬಂಧಿಸುತ್ತದೆ. 6 ತಿಂಗಳ ಪ್ರಾಯೋಗಿಕ ಅವಧಿಯಲ್ಲಿ ನಮ್ಮ ಪರಿಹಾರವು ಈಗಾಗಲೇ ಗಮನಾರ್ಹ ನಿಖರತೆಯನ್ನು ಸಾಧಿಸಿದೆ. ನಮ್ಮ ಜಾಲವನ್ನು ಸ್ಪ್ಯಾಮ್‌ನಿಂದ ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ನಾವು ರಾತ್ರಿಹಗಲು ಶ್ರಮಿಸುತ್ತೇವೆ," ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries