ಎಲೆಗಳು, ಹೂವುಗಳು, ಬೇರುಗಳು ಮತ್ತು ಹಣ್ಣುಗಳು ಎಲ್ಲವೂ ಪ್ರಯೋಜನಕಾರಿಯಾಗಿರುವ ಸಸ್ಯ ಪ್ರಭೇದಗಳು ಬಹಳ ಕಡಿಮೆ. ಆದರೆ ನುಗ್ಗೆ ಅಂತವುಗಳಲ್ಲಿ ಒಂದು.
ನುಗ್ಗೆಕಾಯಿ ನಮ್ಮ ತೋಟಗಳು ಮತ್ತು ಹಿತ್ತಲಲ್ಲಿ ಹೇರಳವಾಗಿ ಬೆಳೆಯುವ ಅದ್ಭುತ ತರಕಾರಿ. ಇಂದು ನಾವು ಅಂಗಡಿಗಳಲ್ಲಿ ಖರೀದಿಸುವ ನುಗ್ಗೆ ಹಿಂದೆ ಹೆಚ್ಚಿನ ಹಿತ್ತಲುಗಳಲ್ಲಿ ಹುಲುಸಾಗಿ ಬೆಳೆಯುತ್ತಿತ್ತು.
ಇದನ್ನು ಪೌಷ್ಟಿಕಾಂಶದ ಪ್ರಯೋಜನಗಳ ಉಗ್ರಾಣ ಎಂದು ಹೇಳಬಹುದು. ನುಗ್ಗೆ ಎಲೆಗಳು ಮತ್ತು ಕಾಯಿಗಳನ್ನು ಸಾಮಾನ್ಯವಾಗಿ ಆಹಾರಕ್ಕಾಗಿ ಬಳಸಲಾಗುತ್ತದೆ. ಆದರೆ, ಇದರ ಹೂವುಗಳು ಮತ್ತು ಬೇರುಗಳು ಔಷಧೀಯ ಗುಣಗಳನ್ನು ಹೊಂದಿವೆ. ಇದು ಜೀವಸತ್ವಗಳ ನಿಧಿ. ಹೆಚ್ಚಿನ ಜನರಿಗೆ ತಿಳಿದಿಲ್ಲದ ಒಂದು ವಿಷಯವೆಂದರೆ ಅದರ ಬೇರಿನ ಪ್ರಯೋಜನಗಳು.
ಮೂತ್ರಪಿಂಡಗಳಲ್ಲಿ ಯೂರಿಕ್ ಆಮ್ಲದ ಶೇಖರಣೆಯಿಂದ ಉಂಟಾಗುವ ಮೂತ್ರನಾಳದ ಕಾಯಿಲೆಗಳಿಗೆ ಮತ್ತು ಮೂತ್ರನಾಳದಲ್ಲಿ ಕಂಡುಬರುವ ತುಲನಾತ್ಮಕವಾಗಿ ಸಣ್ಣ ಕಲ್ಲುಗಳನ್ನು ಕರಗಿಸಲು ನುಗ್ಗೆ ಬೇರಿನಿಂದ ತಯಾರಿಸಿದ ನೀರನ್ನು ಕುದಿಸಿ ಕುಡಿಯುವುದು ತುಂಬಾ ಒಳ್ಳೆಯದು.
ಹೆಚ್ಚಿನ ಮಾಹಿತಿಗೆ ನಿಮ್ಮ ಸ್ಥಳೀಯ ಅನುಭವಿಗಳು ಅಥವಾ ಕುಟುಂಬ ವೈದ್ಯರನ್ನು ಭೇಟಿಯಾಗಬಹುದು.






