ಕೊಚ್ಚಿ: ಪ್ರಮುಖ ಛಾಯಾಗ್ರಾಹಕ ಮತ್ತು ನಟ ರಾಧಾಕೃಷ್ಣನ್ ಚಕ್ಯಾತ್ ನಿಧನರಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಅವರು ನಿಕಾನ್ ಇಂಡಿಯಾದ ಮಾರ್ಗದರ್ಶಕರಾಗಿದ್ದರು. ಯೂಟ್ಯೂಬ್ ಚಾನೆಲ್ ಪಿಕ್ಸೆಲ್ ವಿಲೇಜ್‍ನ ಸಂಸ್ಥಾಪಕರೂ ಆಗಿರುವ ರಾಧಾಕೃಷ್ಣನ್ ಚಕ್ಯಾತ್ ಅವರಿಗೆ 2023 ರಲ್ಲಿ ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಛಾಯಾಗ್ರಹಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅವರು ಚಾರ್ಲಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರ ತಂದೆ ಡೇವಿಡ್ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದ ಮೂಲಕ ಅವರು ಮಲಯಾಳಂ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತರಾದರು.
ಕೊಚ್ಚಿ ಮೂಲದ ರಾಧಾಕೃಷ್ಣನ್ ಚಕ್ಯಾತ್, ದೀರ್ಘಕಾಲ ಮುಂಬೈನಲ್ಲಿ ನೆಲೆಸಿದ್ದರು. ರಾಧಾಕೃಷ್ಣನ್ ಒಬ್ಬ ಪ್ರಸಿದ್ಧ ಫ್ಯಾಷನ್ ಛಾಯಾಗ್ರಾಹಕರಾಗಿದ್ದರು, ಅವರು ದೇಶದ ಪ್ರಮುಖ ಬ್ರ್ಯಾಂಡ್‍ಗಳಿಗೆ ಪೋಟೋಶೂಟ್ ಮಾಡಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದರು ಮತ್ತು ಕ್ಯಾಮೆರಾಗಳು ಮತ್ತು ಛಾಯಾಗ್ರಹಣದಂತಹ ವಿಷಯಗಳ ಕುರಿತು ಹಲವಾರು ತರಗತಿಗಳನ್ನು ನಡೆಸುತ್ತಿದ್ದರು.






