ಕುಂಬಳೆ: ಕೃಷಿ ಭವನದ ಕಚೇರಿಗೆ ನುಗ್ಗಿದ ಬೀದಿ ನಾಯಿ, ನೌಕರರನ್ನು ಎರಡು ಗಂಟೆಗಳ ಕಾಲ ಕಳವಳಗೊಳಿಸಿದ ಘಟನೆ ವರದಿಯಾಗಿದೆ. ಬುಧವಾರ ಬೆಳಿಗ್ಗೆಯಿಂದ, ಕೃಷಿ ಭವನದ ಕಚೇರಿಯ ಹೊರಗೆ ನಾಯಿಯೊಂದು ಬೊಗಳುತ್ತಾ ಓಡಾಡುತ್ತಿರುವುದನ್ನು ನೌಕರರು ಗಮನಿಸಿದ್ದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಚೇರಿಗೆ ಬಂದ ರೈತರೊಬ್ಬರನ್ನು ಹಿಂಬಾಲಿಸಿದ ನಾಯಿ ಕಚೇರಿಯೊಳಗೆ ಪ್ರವೇಶಿಸಿತು. ಇತರ ನಾಯಿಗಳ ದಾಳಿಯಿಂದ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿ ಬಾಯಿಯಿಂದ ನೊರೆ ಬರುತ್ತಿರುವುದನ್ನು ಮತ್ತು ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದಾಗ ಸಿಬ್ಬಂದಿಗೆ ಅದು ಬೀದಿ ನಾಯಿ ಎಂದು ಅರಿವಾಯಿತು.
ಅದನ್ನು ಓಡಿಸಲು ನೌಕರರು ಅನೇಕ ತಂತ್ರಗಳನ್ನು ಪ್ರಯತ್ನಿಸಿದರು, ಆದರೆ ಅದು ಕಚೇರಿಯ ಪ್ರತಿಯೊಂದು ಕೋಣೆಗೆ ನುಗ್ಗಿ ನೌಕರರ ಮೇಲೆ ನುಗ್ಗಲು ಪ್ರಯತ್ನಿಸಿತು. ಏನು ಮಾಡಬೇಕೆಂದು ತಿಳಿಯದೆ ನೌಕರರು ಓಡಾಡುತ್ತಿದ್ದರು. ಕೊನೆಗೆ, ಸಾಕಷ್ಟು ಪ್ರಯತ್ನದ ನಂತರ,ನಾಯಿಯನ್ನು ಹೊರದಬ್ಬಲು ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರನ್ನು ಕರೆಸಲಾಯಿತು. ಅವರು ನಾಯಿಯನ್ನು ಹಿಡಿದು, ಅಮಲು ಬರಿಸುವ ಚುಚ್ಚುಮದ್ದನ್ನು ನೀಡಿ, ನಂತರ ಸಂಜೆ 5 ಗಂಟೆ ಸುಮಾರಿಗೆ ಪಕ್ಕದ ಕಾಡಿಗೆ ಬಿಟ್ಟರು. ಬಳಿಕ ಉದ್ಯೋಗಿಗಳಿಗೆಸಮಾಧಾನಗೊಂಡು ಮರಳಿದರು.
ಕುಂಬಳೆ ಕೃಷಿ ಭವನದಲ್ಲಿ ಭಯ ಹುಟ್ಟಿಸಿದ ಶ್ವಾನ
0
ಮೇ 22, 2025
Tags




