ಕೊಚ್ಚಿ: ಪ್ರಧಾನಿ ಕಚೇರಿಯಿಂದ ಕರೆಯುವುದೆಂದು ಹೇಳಿಕೊಂಡು ಪೋನ್ ಕರೆ ಮಾಡಿ ಐಎನ್.ಎಸ್ ವಿಕ್ರಾಂತ್ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೋಝಿಕ್ಕೋಡ್ ನಡಕ್ಕಾವು ಮೂಲದ ಮುಜೀಬ್ ರೆಹಮಾನ್ ಬಂಧಿತ ಆರೋಪಿ. ಇಂದು ಬೆಳಿಗ್ಗೆ ಆತನನ್ನು ಕೋಝಿಕ್ಕೋಡ್‍ನಲ್ಲಿ ಬಂಧಿಸಿ ಕೊಚ್ಚಿಗೆ ಕರೆತರಲಾಯಿತು. ವಿಚಾರಣೆಯ ನಂತರ, ಆತನ ಬಂಧನವನ್ನು ದಾಖಲಿಸಲಾಯಿತು.
ಆತ ಕೊಚ್ಚಿ ನೌಕಾ ಪ್ರಧಾನ ಕಚೇರಿಗೆ ಸ್ಥಿರ ದೂರವಾಣಿಯಲ್ಲಿ ಕರೆ ಮಾಡುವ ಮೂಲಕ ವಿಕ್ರಾಂತ್ ನೌಕೆಯ ಪ್ರಸ್ತುತ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸಿದ. ಶುಕ್ರವಾರ ರಾತ್ರಿ ಒಂಬತ್ತು ಗಂಟೆಗೆ ಪೋನ್ ಕರೆ ಮಾಡಿದ್ದ. ಕರೆ ಮಾಡಿದಾಗ ತಾನು ಪ್ರಧಾನಿ ಕಚೇರಿಯಿಂದ ಕರೆಯುತ್ತಿದ್ದು ಹೆಸರು ರಾಘವನ್ ಎಂದು ಹೇಳಿಕೊಂಡಿದ್ದ. ಘಟನೆಗೆ ಸಂಬಂಧಿಸಿದಂತೆ ನೌಕಾಪಡೆ ನೀಡಿದ ದೂರಿನ ಆಧಾರದ ಮೇಲೆ ಹಾರ್ಬರ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದ ಮಧ್ಯೆ ನೌಕಾಪಡೆಯ ಪ್ರಧಾನ ಕಚೇರಿಗೆ ಅಂತಹ ಒಂದು ಪೋನ್ ಕರೆ ಮಾಡಲಾಗಿತ್ತು. ಆದ್ದರಿಂದ, ಪೋಲೀಸರು ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದಾರೆ.






