ನವದೆಹಲಿ: 'ಭಾರತದ ಭದ್ರತೆಗೆ ನೇರವಾಗಿ ಧಕ್ಕೆಯಾಗುವ ಪಾಕಿಸ್ತಾನದೊಂದಿಗೆ ಅಪವಿತ್ರ ಮೈತ್ರಿ ಹೊಂದಿರುವ ಟರ್ಕಿಗೆ ಆರ್ಥಿಕ ನಿರ್ಬಂಧ ವಿಧಿಸಬೇಕು' ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಆಗ್ರಹಿಸಿದೆ.
'ನಾಗರಿಕ ವಿಮಾನಯಾನ ಸಂಪರ್ಕವನ್ನು ಸ್ಥಗಿತಗೊಳಿಸಬೇಕು.
ರಾಜತಾಂತ್ರಿಕ ಸಂಬಂಧವನ್ನು ಪುನರ್ ಪರಿಶೀಲಿಸಬೇಕು' ಎಂದು ಕೇಂದ್ರ ಸರ್ಕಾರವನ್ನು ಬುಧವಾರ ಒತ್ತಾಯಿಸಿದೆ.
ಸೈನಿಕರು ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಟರ್ಕಿಗೆ ಪ್ರವಾಸ ಕೈಗೊಳ್ಳಬಾರದು ಮತ್ತು ಅಲ್ಲಿನ ಉತ್ಪನ್ನಗಳನ್ನು ಖರೀದಿಸಬಾರದು ಎಂದು ಎಸ್‌ಜೆಎಂ ದೇಶವಾಸಿಗಳಿಗೆ ಮನವಿ ಮಾಡಿದೆ.
'ಚೀನಾದ ಬಳಿಕ ಪಾಕಿಸ್ತಾನಕ್ಕೆ ಹೆಚ್ಚು ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರ ಟರ್ಕಿ. ಅತ್ಯಾಧುನಿಕ ರಕ್ಷಣಾ ಸಾಮಗ್ರಿ ನೀಡಿದೆ. ವೈಮಾನಿಕ ಯುದ್ಧ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಆಘಾತಕಾರಿಯಾದುದು' ಎಂದು ಎಸ್‌ಜೆಎಂ ರಾಷ್ಟ್ರೀಯ ಸಹ ಸಂಚಾಲಕ ಅಶ್ವಿನಿ ಮಹಾಜನ್ ತಿಳಿಸಿದ್ದಾರೆ.




