ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅವರ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕವನ್ನು ರೂಪೀಕರಿಸಲಾಗಿದೆ.
ಜಿಲ್ಲಾ ಸಮಿತಿಯ ನಿರ್ದೇಶಕರಾಗಿ ಸಾಮಾಜಿಕ ಮುಖಂಡರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ನೇಮಕಗೊಂಡಿದ್ದಾರೆ. ಸಮಿತಿಯಲ್ಲಿ ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ (ಗೌರವಾಧ್ಯಕ್ಷರು), ಸಾಹಿತಿ ವಿರಾಜ್ ಅಡೂರು (ಅಧ್ಯಕ್ಷರು), ಕೆ ನರಸಿಂಹ ಭಟ್ ಏತಡ್ಕ, ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು, ರಂಗ ಶರ್ಮ ಉಪ್ಪಂಗಳ (ಉಪಾಧ್ಯಕ್ಷರು), ದೇವರಾಜ್ ಆಚಾರ್ಯ ಸೂರಂಬೈಲು (ಪ್ರಧಾನ ಕಾರ್ಯದರ್ಶಿ), ರೇಖಾ ರೋಶನ್ (ಕಾಸರಗೋಡು ವಲಯ ಸಂಘಟನಾ ಕಾರ್ಯದರ್ಶಿ), ಗಿರೀಶ್ ಪಿ ಎಂ ಚಿತ್ತಾರಿ (ಹೊಸದುರ್ಗ ವಲಯ ಸಂಘಟನಾ ಕಾರ್ಯದರ್ಶಿ), ಶಾರದಾ ಮೊಳೆಯಾರ್ (ಎಡನೀರು ವಲಯ ಸಂಘಟನಾ ಕಾರ್ಯದರ್ಶಿ), ಸುಭಾಷಿಣಿ ಚಂದ್ರ ಕನ್ನಟಿಪಾರೆ ( ಮಂಜೇಶ್ವರ ವಲಯ ಸಂಘಟನಾ ಕಾರ್ಯದರ್ಶಿ), ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ( ಮುಳ್ಳೇರಿಯಾ ವಲಯ ಸಂಘಟನಾ ಕಾರ್ಯದರ್ಶಿ), ನಿರ್ಮಲ ಶೇಷಪ್ಪ ಖಂಡಿಗೆ (ಪೆರ್ಲ ವಲಯ ಸಂಘಟನಾ ಕಾರ್ಯದರ್ಶಿ) ಶಾರದಾ ಎಸ್ ಭಟ್ ಕಾಡಮನೆ (ಬದಿಯಡ್ಕ ವಲಯ ಸಂಘಟನಾ ಕಾರ್ಯದರ್ಶಿ) ಶ್ಯಾಮಲಾ ರವಿರಾಜ್ (ಕುಂಬಳೆ ವಲಯ ಸಂಘಟನಾ ಕಾರ್ಯದರ್ಶಿ), ಸಂಧ್ಯಾರಾಣಿ ಟೀಚರ್ (ಖಜಾಂಜಿ), ರಾಧಾಕೃಷ್ಣ ಭಟ್ ಕುರುಮುಜ್ಜಿ, ವನಜಾಕ್ಷಿ ಪಿ. ಚಂಬ್ರಕಾನ, ಅನ್ನಪೂರ್ಣ ಎನ್ ಕುತ್ತಾಜೆ, ಗಾಯತ್ರಿ ಪಳ್ಳತ್ತಡ್ಕ, ಪವಿತ್ರಾ ಎಂ ಬೆಳ್ಳಿಪ್ಪಾಡಿ, ಶೇಖರ ಎಂ ದೇಲಂಪಾಡಿ, ಪ್ರಿಯಾ ಸಿ ಬಾಯಾರು, ಸುಜಿತ್ ಕುಮಾರ್ ಬೇಕೂರು, ಉಷಾ ಟೀಚರ್ ಕೋಟೆಕಣಿ, ಚಂಚಲಾಕ್ಷಿ ಶ್ಯಾಮ ಪ್ರಕಾಶ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ ಎಂದು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.





