ನವದೆಹಲಿ : ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದು ಕಠಿಣ ರಾಜತಾಂತ್ರಿಕ ನೀತಿಗಳ ಮೂಲಕ ಪಾಪಿ ಪಾಕಿಸ್ತಾನಕ್ಕೆ ಪೆಟ್ಟು ನೀಡಲು ಮುಂದಾಗಿದೆ. ಮತ್ತೊಂದೆಡೆ ಗಡಿಯಲ್ಲಿ ಭಾರತೀಯ ಸೇನೆ ಯುದ್ಧಕ್ಕೆ ಸನ್ನದ್ಧವಾಗಿ ತಾಲೀಮು ಆರಂಭಿಸಿದೆ.
ಈ ಮಧ್ಯೆ ಪಾಕಿಸ್ತಾನಕ್ಕೆ ಮತ್ತೊಂದು ಮರ್ಮಾಘಾತ ನೀಡಲು ಭಾರತ ಮುಂದಾಗಿದ್ದು,ಇನ್ನು ಮುಂದೆ ಪಾಕಿಸ್ತಾನಕ್ಕೆ ಸಾಲ ನೀಡುವ ಮುನ್ನ ಪರಾಮರ್ಶಿಸಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಗೆ ಭಾರತ ಆಗ್ರಹಿಸಿದೆ.
ಸದ್ಯ ಪಾಕಿಸ್ತಾನ ಬದುಕಿರೋದೇ ಸಾಲದಲ್ಲಿ..ಈಗಾಗಲೇ ಹಣದುಬ್ಬರ ಹೆಚ್ಚಾಗಿದ್ದು ಪಾಕ್ ನಿರಂತರವಾಗಿ ಸಾಲಗಳನ್ನು ಪಡೆದು ದೇಶ ಮುನ್ನಡೆಸುತ್ತಿದೆ.ಹೀಗಾಗಿ ಕಳೆದ ವರ್ಷ ಐಎಂಎಫ್ ಪಾಕಿಸ್ತಾನಕ್ಕೆ 7 ಬಿಲಿಯನ್ ಡಾಲರ್, ಈ ವರ್ಷ 1.3 ಬಿಲಿಯನ್ ಡಾಲರ್ ಸಾಲ ನೀಡಿತ್ತು.
ಆದ್ರೆ ಪಾಪಿ ಪಾಕಿಸ್ತಾನ ಈ ಹಣವನ್ನು ಉಗ್ರರ ಪೋಷಣೆಗೆ ದುರುಪಯೋಗಿಸಿಕೊಳ್ಳಬಹುದು ಎಂದು ಐಎಂಎಫ್ ಮುಂದೆ ಭಾರತದ ಆಕ್ಷೇಪ ವ್ಯಕ್ತಪಡಿಸಿದೆ.ಆ ಮೊಲಕ ಕೇವಲ ರಾಜತಾಂತ್ರಿಕವಾಗಿ ಮಾತ್ರವಲ್ಲ,
ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ಪಾಕಿಸ್ತಾನದ ವಿರುದ್ಧ ಭಾರತ ಕ್ರಮಕ್ಕೆ ಮುಂದಾಗಿದೆ.




