ಕಾಸರಗೋಡು: ಮಂಗಳೂರಿನಿಂದ ಪಯ್ಯನ್ನೂರಿನಲ್ಲಿರುವ ನಿರ್ಮಾಣ ಸ್ಥಳಕ್ಕೆ ಸಂಚರಿಸುತ್ತಿದ್ದ ಟಾರಸ್ ವಾಹನವೊಂದು ನಿಯಂತ್ರಣ ತಪ್ಪಿ ಮೊಗ್ರಾಲ್ ಫ್ಲೈಓವರ್ ಮೇಲೆ ನಿಲ್ಲಿಸಿದ್ದ ಇನ್ನೊಂದು ಟಾರಸ್ ವಾಹನದ ಹಿಂಭಾಗಕ್ಕೆ ಡಿಕ್ಕಿಯಾದ ಪರಿಣಾಮವಾಗಿ ವಾಹನದ ಕ್ಯಾಬಿನ್ ಕುಸಿದು ಬಿದ್ದು, ಚಾಲಕ ತ್ರಿಶೂರ್‍ನ ಕೊಡಕಾರ ನಿವಾಸಿ ಜೋಬಿ ಬಿಜು ಗಾಯಗೊಂಡಿದ್ದಾರೆ. ಕ್ಯಾಬಿನ್ ಮತ್ತು ಸ್ಟೀರಿಂಗ್ ವೀಲ್ ನಡುವೆ ಸಿಲುಕಿಕೊಂಡಿದ್ದ ಇವರನ್ನು ಸ್ಥಳೀಯರು ಹಾಗೂ ಕಾಸರಗೋಡು ಅಗ್ನಿಶಾಮಕ ದಳ ಸಿಬ್ಬಂದಿ ಅತ್ಯಂತ ಸಾಃಸದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.


