ಕಾಸರಗೋಡು: ಕೇರಳ ಪ್ಲಸ್‍ಟು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಶೇ. ನೂರು ಪಲಿತಾಂಶ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿ 77.81ಫಲಿತಾಂಶ ದಾಖಲಾಗಿದೆ. 370642ಮಂದಿಪರೀಕ್ಷೆ ಬರೆದಿದ್ದು, ಇವರಲ್ಲಿ 288394ಮಂದಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಶೇ. 71.09 ಫಲಿತಾಂಶ ದಾಖಲಾಗಿದೆ. ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ವಿಭಾಗದಲ್ಲಿ ಶೇ. 61.70 ಫಲಿತಾಂಶ ದಾಖಲಾಗಿದೆ. ಒಟ್ಟು 1175 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 725 ಜನರು ಉತ್ತೀರ್ಣರಾಗಿದ್ದಾರೆ.
ಪೆರ್ಲ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಮರ್ಸ್ ವಿದ್ಯಾರ್ಥಿನಿ, ಪಡ್ರೆ ಸರವು ನಿವಾಸಿ ರಾಮಕೃಷ್ಣ ಭಟ್-ಭುವನೇಶ್ವರೀ ದಂಪತಿ ಪುತ್ರಿ ಶ್ರೀರಂಜಿನಿ ಹಾಗೂ ಕಾಞಂಗಾಡು ರಾವಣೇಶ್ವರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ದೇವಿಕಾ ಪಿ. ವಿಜ್ಞಾನ ವಿಷಯದಲ್ಲಿ 1200 ರಲ್ಲಿ 1200 ಅಂಕಗಳನ್ನು ಗಳಿಸಿದ್ದಾರೆ. ಇವರು ರಾವಣೇಶ್ವರ ಪಡಿಞËರಕ್ಕರ ನಿವಾಸಿ ಕುಞಕೃಷ್ಣನ್-ಸುಜಾತಾ ದಂಪತಿ ಪುತ್ರಿ. ಕಾಸರಗೋಡು ಜಿಲ್ಲೆಯಲ್ಲಿ ವಿಜ್ಞಾನದಲ್ಲಿ ಪೂರ್ಣ ಅಂಕ ಗಳಿಸಿದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.
ಕೇರಳ ಪ್ಲಸ್ ಟು ಪರೀಕ್ಷೆಯ ಸಮಾಜ ಶಾಸ್ತ್ರ ವಿಭಾಗದಲ್ಲಿ ಕುಂಬಳೆ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲಾ ವಿದ್ಯಾರ್ಥಿ ದುರ್ಗಾಶಂಕರ ಶೇಕಡಾ 95 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಇವರು ಕುಂಬಳೆ ಸಮೀಪದ ಶೇಡಿಕಾವು ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಅಡಿಗ-ಲತಾ ಅಡಿಗ ದಂಪತಿ ಪುತ್ರ.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಮರ್ಸ್ ವಿದ್ಯಾರ್ಥಿನಿ ಶ್ರಾವ್ಯಾ ಬಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 1200 ಅಂಕದಲ್ಲಿ 1125ಅಂಕ ಪಡೆದುಕೊಂಡಿರುವ ಇವರು, ಬಜಕೂಡ್ಲು ವಸಂತಕುಮಾರ್-ಉಷಾ ದಂಪತಿ ಪುತ್ರಿ ಹಾಗೂ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಹಳೇ ವಿದ್ಯಾರ್ಥಿನಿ.






