ನವದೆಹಲಿ: ಖಾಲಿಸ್ತಾನಿ ಉಗ್ರ ಹರ್ವಿಂದರ್ ಸಿಂಗ್ ಸಧು ಅಲಿಯಾಸ್ ರಿಂಡಾ ಸಹಚರನೊಬ್ಬನನ್ನು ಎನ್‌ಐಎ ಅಧಿಕಾರಿಗಳು ಬಿಹಾರದ ಮೋತಿಹಾರಿಯಲ್ಲಿ ಭಾನುವಾರ ಬಂಧಿಸಿದ್ದಾರೆ.
ಕಶ್ಮೀರ್ ಸಿಂಗ್ ಗಲ್ವಡ್ಡಿ ಬಂಧಿತ. ಈತ ಪಂಜಾಬ್‌ನ ಲುಧಿಯಾನ ನಿವಾಸಿಯಾಗಿದ್ದು, ಪಂಜಾಬ್‌ನ ನಾಭಾ ಜೈಲಿನಿಂದ 2016ರಲ್ಲಿ ಪರಾರಿಯಾಗಿದ್ದ.
ಹರ್ವಿಂದರ್ ಸಿಂಗ್ ಸಧು ನೇತೃತ್ವದ ಬಬ್ಬರ್ ಖಾಲಸಾ ಇಂಟರ್‌ನ್ಯಾಷನಲ್ (ಬಿಕೆಐ) ಉಗ್ರ ಸಂಘಟನೆಗೆ ವಸತಿ ಮತ್ತು ಸಾಗಣೆ ಸೌಲಭ್ಯ ಕಲ್ಪಿಸಿದ, ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಹಾಗೂ ಹಣಕಾಸು ನೆರವು ಒದಗಿಸುವಲ್ಲಿ ತೊಡಗಿದ್ದ ಆರೋಪಗಳು ಬಂಧಿತ ಕಶ್ಮೀರ್‌ನ ಮೇಲಿವೆ ಎಂದು ಪ್ರಕಟಣೆ ತಿಳಿಸಿದೆ.





