ಮಂಜೇಶ್ವರ: ಎಸ್.ಎ.ಟಿ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಗುರುವಾರ ನಡೆಚ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸುನಿಲ್ ಭಟ್ ಎಂ. ವಹಿಸಿದ್ದರು. ಶ್ರೀಮತ್ ಅನಂತೇಶ್ವರ ದೇವಸ್ಥಾನದ ಅಧ್ಯಕ್ಷ ತೋನ್ಸೆ ಗಣಪತಿ ಪೈ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಗಳಿಗೆ ಔಪಚಾರಿಕ ಚಾಲನೆ ನೀಡಿದರು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ. ಹಿರಿಯ ಸಂಶೋಧಕ, ಕೇರಳ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಪಯ್ಯನ್ನೂರು ರಮೇಶ್ ಪೈ, ಹಿರಿಯ ಲೇಖಕ, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಂಕರ್ ಯು. ಮಂಗೇಶ್ವರ, ಮಂಜೇಶ್ವರ ಗ್ರಾಮ ಪಂಚಾಯತಿ ಆರೋಗ್ಯ- ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯ ಶೆಣೈ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎ.ಟಿ ವಿದ್ಯಾ ಸಂಸ್ಥೆಗಳ ವಿವಿಧ ಕಾಲಘಟ್ಟಗಳಲ್ಲಿ ಸೇವೆ ಸಲ್ಲಿಸಿದ ಶಾಲಾ ಪ್ರಬಂಧಕರು, ಕರಸ್ಪಾಂಡೆಂಟ್, ಅಧ್ಯಾಪಕ- ಅಧ್ಯಾಪಕೇತರ ಸಿಬ್ಬಂದಿಗಳಿಗೆ ಗೌರವಾರ್ಪಣೆ ಸಲ್ಲಿಸುವ ಭಾವನಾತ್ಮಕವಾದ 'ಗುರುವಂದನಾ ಕಾರ್ಯಕ್ರಮ' ಜರಗಿತು.
2024-25 ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕ ವಿದ್ಯಾರ್ಥಿಗಳನ್ನು ಅತಿಥಿ ಅಭ್ಯಾಗತರ ಸಮಕ್ಷಮದಲ್ಲಿ
ಅಭಿನಂದಿಸಲಾಯಿತು. ಶಾಲಾ ಶತಮಾನೋತ್ಸವ ಸಂಭ್ರಮ-2025 ರ ಪ್ರಯುಕ್ತ ಆಯೋಜಿಸಲಾಗಿದ್ದ ಅಂತರ್ ಶಾಲಾ ಕಾಲೇಜು ಸ್ಪರ್ಧೆ ಒಳಗೊಂಡಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಉಪಾಧ್ಯಕ್ಷರು, ಎಸ್.ಎ.ಟಿ ಶಿಕ್ಷಣ ಸಂಸ್ಥೆಗಳ ಕರಸ್ಪಾಂಡೆಂಟ್ ಆರ್. ನಿತಿನ್ ಚಂದ್ರ ಪೈ ಮಂಜೇಶ್ವರ, ಎಸ್‍ಎಟಿ ಶಿಕ್ಷಣ ಸಂಸ್ಥೆಗಳ ಪ್ರಬಂಧಕ ಪ್ರಶಾಂತ್ ಹೆಗ್ಡೆ, ಮಂಗಳೂರಿನ ಹೆಸರಾಂತ ಆರ್ಕಿಟೆಕ್ಟ್ ನರೇಂದ್ರ ಪ್ರಭು ಮಂಗಳೂರು, ಶ್ರೀಮತ್ ಅನಂತೇಶ್ವರ ದೇವಸ್ಥಾನದ ಮೊಕ್ತೇಸರ ರಾಜೇಶ್ ಪೈ ಕಾಸರಗೋಡು
ಶ್ರೀಮತ್ ಅನಂತೇಶ್ವರ ದೇವಸ್ಥಾನದ ಪ್ರಬಂಧಕ ರಾಹುಲ್ ಕಾಮತ್, ಶಾಲಾ ಶತಮಾನೋತ್ಸವ ಸಮಿತಿ ಸಂಚಾಲಕ ದೇವದಾಸ್ ವಿ. ಪ್ರಭು ಎಸ್., ಎಸ್ ಎ ಟಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲೆ ಸುಮನಾ ಐಲ್, ಎಸ್.ಎ.ಟಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಮಲ್ಯ ಎಂ., ಎಸ್.ಎ.ಟಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ತೇಜಸ್ ಕಿರಣ್,
ಎಸ್.ಎ.ಟಿ ಹೈಯರ್ ಸೆಕೆಂಡ್ ಶಾಲಾ ವಿಭಾಗದ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಬಶೀರ್ ಬಿ., ಎಸ್.ಎ.ಟಿ ಕಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ, ಅಹಮದ್ ಸಿಹಾದ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಬ್ಯಾಂಡ್ ವಾದನದೊಂದಿಗೆ ಅತಿಥಿ -ಅಭ್ಯಾಗತರನ್ನು ವೇದಿಕೆಗೆ ಕರೆತರಲಾಯಿತು. ಶ್ರೀಮತ್ ಅನಂತೇಶ್ವರ ದೇವರು ಹಾಗೂ ಪೂಜ್ಯರಾದ ಹಿರಿಯ- ಹಿರಿಯ ಸ್ವಾಮೀಜಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶ್ರೀಮತ್ ಅನಂತೇಶ್ವರ ದೇವಸ್ಥಾನದ ಕೋಶಾಧಿಕಾರಿ ಜಿ. ಪ್ರಶಾಂತ್ ಪೈ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಅಧ್ಯಾಪಕ ಪೂರ್ಣಯ್ಯ ಪುರಾಣಿಕ್ ವಂದಿಸಿದರು. ಶಿಕ್ಷಕರಾದ ಈಶ್ವರ್ ಕಿದೂರು, ಜಯಪ್ರಕಾಶ್ ಶೆಟ್ಟಿ ಅಂಗಡಿದಾರು, ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ನಾಗೇಶ್ ವಿ. ಸಹಕರಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಚೆಂಡೆ ವಾದನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಭೋಜನ ವಿರಾಮದ ಬಳಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.




.jpg)
