ಠಾಣೆ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯ ಹೆಚ್ಚುತ್ತಿರುವ ಕಾರಣ ನಾಗರಿಕರಿಗೆ ತುರ್ತು ಸೇವೆಗಳನ್ನು ಒದಗಿಸಲು ಸಂಪೂರ್ಣ ಸಿದ್ಧರಾಗಿರುವಂತೆ ಹಾಗೂ ಹೆಚ್ಚು ಜಾಗರೂಕರಾಗಿರುವಂತೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಹಾರಾಷ್ಟ್ರ ಘಟಕವು ರಾಜ್ಯದ ವೈದ್ಯರಿಗೆ ಸೂಚಿಸಿದೆ.
ರಾಷ್ಟ್ರೀಯ ಬಿಕ್ಕಟ್ಟಿನ ಕ್ಷಣಗಳಲ್ಲಿ, ನಮ್ಮ ಆರೋಗ್ಯ ವ್ಯವಸ್ಥೆಯ ಬಲವು ಮೂಲಸೌಕರ್ಯ ಒದಗಿಸುವುದರಲ್ಲಿ ಮಾತ್ರವಲ್ಲ, ವೈದ್ಯರ ಮಾನಸಿಕ ಸಿದ್ಧತೆಯೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಐಎಂಎ ಅಧ್ಯಕ್ಷ ಡಾ. ಸಂತೋಷ್ ಕದಮ್ ಹೇಳಿದ್ದಾರೆ.
ಗುರುವಾರ ಸಂಜೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಎಲ್ಲಾ ಕ್ಲಿನಿಕ್, ನರ್ಸಿಂಗ್ ಹೋಮ್, ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಿರುವ ವಸ್ತುಗಳು, ಜೀವರಕ್ಷಕ ಔಷಧಗಳನ್ನು ರಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಎಲ್ಲಾ ಆಸ್ಪತ್ರೆಗಳಲ್ಲೂ ವಿಪತ್ತು ನಿರ್ವಹಣಾ ತಂಡವನ್ನು ರಚಿಸುವಂತೆಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.





