ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಗುಡ್ಡ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ಪಶ್ಚಿಮ ಬಂಗಾಳ ಕೋಲ್ಕತ್ತಾ ಮೂಲದ ಮುಮ್ತಾಜ್ ಮಿರ್ (18) ಎಂದು ಗುರುತಿಸಲಾಗಿದೆ. ಗಾಯಗೊಂಡ ಕೋಲ್ಕತ್ತಾ ಮೂಲದ ಮುನ್ನಲ್ ಲಸ್ಕರ್ (55) ಮತ್ತು ಮೋಹನ್ ಮೇಜರ್ (18) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಸೋಮವಾರ ಬೆಳಿಗ್ಗೆ 10:30 ಕ್ಕೆ ಚೆರ್ವತ್ತೂರು ಮಟ್ಟಲೈನಲ್ಲಿ ಗುಡ್ಡ ಹಠಾತ್ತನೆ ಕುಸಿದು ಅವಘಡ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಡಿವೈಎಸ್ಪಿ ಬಾಬು ಪೆರಿಂಙÉೂೀತ್ ನೇತೃತ್ವದ ಪೋಲೀಸ್ ತಂಡ ಮತ್ತು ಹೈ ಪೋರ್ಸ್ ಸ್ಥಳಕ್ಕೆ ತಲುಪಿ, ಇತರ ಕಾರ್ಮಿಕರ ಸಹಾಯದಿಂದ ಮಣ್ಣನ್ನು ತೆಗೆದು ನೆಲದಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದರು. ಗಾಯಗೊಂಡ ಮೂವರು ಕಾರ್ಮಿಕರನ್ನು ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರಲ್ಲಿ ಓರ್ವ ಸಾವನ್ನಪ್ಪಿದರು. ಅವರೆಲ್ಲರೂ ಅನ್ಯರಾಜ್ಯ ಕಾರ್ಮಿಕರಾಗಿದ್ದು ಮೇಘಾ ಕಂಪನಿ ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆ ಪಡೆದು ನಡೆಸುತ್ತಿದೆ.





