ಕಾಸರಗೋಡು: ಸಾಕ್ಷರತಾ ಪ್ರಮಾಣಪತ್ರಗಳ ವಿತರಣೆ ಆರಂಭವಾಗಿದೆ. ರಾಷ್ಟ್ರೀಯ ಸಾಕ್ಷರತಾ ಯೋಜನೆಯ ಭಾಗವಾಗಿ, ಕಾಸರಗೋಡು ಜಿಲ್ಲೆಯಲ್ಲಿ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ 5003 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಜಿಲ್ಲಾ ಮಟ್ಟದ ವಿತರಣೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ, ಮುಳಿಯಾರು ಪಂಚಾಯತ್ ನ 75 ವರ್ಷದ ಕುಂಬಯಮ್ಮ ಅವರಿಗೆ ವಿತರಿಸಿದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಅಡ್ವ. ಎಸ್.ಎನ್. ಸರಿತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ.ಪಿ. ಹರಿದಾಸ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಶ್ಯಾಮಲಕ್ಷ್ಮಿ, ಜಿಲ್ಲಾ ಸಂಯೋಜಕ ಕೆ.ಎನ್. ಬಾಬು. ಸಾಕ್ಷರತಾ ಸಮಿತಿ ಸದಸ್ಯ ಕೆ.ವಿವಿಜಯನ್, ಮಾಸ್ಟರ್ ಪ್ರೇರಕ್ ಸುಮಾ ಕಣ್ಣನ್ ಮಾತನಾಡಿದರು. ಈ ವರ್ಷ, ಸಾಕ್ಷರತಾ ಮಿಷನ್ 6,000 ಹೆಚ್ಚು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಕೆಲಸವನ್ನು ಪ್ರಾರಂಭಿಸಿದೆ.




.jpeg)
