ಲಂಡನ್ (PTI): ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ತಮ್ಮ ನಡುವಿನ ಸಂಘರ್ಷವನ್ನು ತಗ್ಗಿಸಬೇಕು. ಈ ಕುರಿತು ಮಾತುಕತೆ ನಡೆಸುವುದಕ್ಕೆ ಎರಡೂ ದೇಶಗಳಿಗೆ ಬೆಂಬಲ ನೀಡುವುದಕ್ಕೆ ತಾನು ಸಿದ್ಧ ಎಂದು ಬ್ರಿಟನ್ ಬುಧವಾರ ಹೇಳಿದೆ.
'ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ.
ಈ ಸಂಬಂಧ, ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರು ಎರಡೂ ದೇಶದೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ' ಎಂದು ಬ್ರಿಟನ್‌ನ ವ್ಯವಹಾರ ಹಾಗೂ ವ್ಯಾಪಾರ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್‌ತಿಳಿಸಿದ್ದಾರೆ.
'ನಾವು ಎರಡೂ ದೇಶಗಳ ಸ್ನೇಹಿತರೂ ಹೌದು, ಪಾಲುದಾರರೂ ಹೌದು. ಪ್ರಾದೇಶಿಕ ಭದ್ರತೆ ಎರಡೂ ದೇಶಗಳಿಗೂ ಮಹತ್ವದ ಅಂಶವಾಗಿದ್ದು, ಮಾತುಕತೆಯ ಮೂಲಕ ಬಿಕ್ಕಟ್ಟು ನಿವಾರಿಸಿಕೊಳ್ಳಲು ಬೆಂಬಲ ನೀಡಲು ಸಿದ್ಧವಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.




