ಪತ್ತನಂತಿಟ್ಟ: ಮೇಕೊಳೂರ್ ಋಷಿಕೇಶ ದೇವಸ್ಥಾನದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಡಿವೈಎಫ್‍ಐ ಪ್ರಾದೇಶಿಕ ಕಾರ್ಯದರ್ಶಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಪ್ರಾದೇಶಿಕ ಕಾರ್ಯದರ್ಶಿ ಜೋಜೊ. ಕೆ. ವಿಲ್ಸನ್ ಮತ್ತು ಅಧ್ಯಕ್ಷ ಎಬಿನ್ ನೇತೃತ್ವದಲ್ಲಿ, ದೇವಾಲಯದಲ್ಲಿ ಹಿಂಸಾಚಾರವನ್ನು ನಡೆಸಲಾಗಿತ್ತು. ಭಯದ ವಾತಾವರಣವನ್ನು ಸೃಷ್ಟಿಸಿದ್ದರು.
ಉತ್ಸವದ ಜೊತೆಗೆ ನಡೆದ ಸಂಗೀತೋತ್ಸವ-ಗಾನ ಮೇಳದ ಸಂದರ್ಭದಲ್ಲಿ ಆರೋಪಿಗಳು ಕುಡಿದು ಗಲಾಟೆ ಮಾಡಿದ್ದರು. ಸ್ಥಳದಿಂದ ಹೊರಟುಹೋದ ಆರೋಪಿಗಳು ನಂತರ ಹಿಂತಿರುಗಿ ಹಿಂಸಾಚಾರ ಎಸಗಿದರು. ಅವರು ದೇವಾಲಯದ ಬಲಿಪೀಠವನ್ನು ಪ್ರವೇಶಿಸಿ, ಮುತ್ತಿನ ಬಲಿಪೀಠವನ್ನು ನಾಶಪಡಿಸಿದರು ಮತ್ತು ಮೈಕ್ರೊಪೋನ್, ಕುರ್ಚಿ ಮತ್ತು ಇತರ ವಸ್ತುಗಳನ್ನು ಎಸೆದರು. ಆರೋಪಿಗಳು ದೇವಸ್ಥಾನದಲ್ಲಿದ್ದ ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿದರು. ತಡೆಯಲು ಪ್ರಯತ್ನಿಸಿದ ದೇವಾಲಯದ ನೌಕರರನ್ನೂ ಅವರು ಥಳಿಸಿದ್ದರು.
ಆರೋಪಿಗಳು ಪಕ್ಷದ ಬೆಂಬಲದೊಂದಿಗೆ ಹಿಂಸಾಚಾರವನ್ನು ನಡೆಸಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ. ಹೇಳಿಕೆ ನೀಡಲು ಪೋಲೀಸ್ ಠಾಣೆಗೆ ಬಂದ ದೇವಾಲಯದ ಅಧಿಕೃತರಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂಬ ದೂರುಗಳೂ ಇವೆ. ಘಟನೆಯನ್ನು ವಿರೋಧಿಸಿ ದೇವಾಲಯ ಸಂರಕ್ಷಣಾ ಸಮಿತಿಯು ಆ ಪ್ರದೇಶದಲ್ಲಿ ಹರತಾಳ ಆಚರಿಸಿತ್ತು.






