ಇನ್ನು 2022ರಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಕೊಲೆ ಬೆನ್ನಲ್ಲೇ ಸಂಭವಿಸಿದ್ದ ಫಾಜಿಲ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಅದೇ ವೈಷಮ್ಯಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಸದ್ಯ ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಎಡಿಜಿಪಿ ಆರ್. ಹಿತೇಂದ್ರ ಕೊಲೆಗಡುಕರ ಮಾಹಿತಿ ದೊರೆತಿದೆ ಎಂದಿದ್ದಾರೆ.
ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ʼಸುಹಾಸ್ ಶೆಟ್ಟಿ ರೌಡಿ ಶೀಟರ್ ಆಗಿದ್ದು, ಆತನ ಮೇಲೆ ಐದಾರು ಕೇಸ್‌ಗಳಿವೆ. ಮುಖ್ಯವಾಗಿ 2022ರಲ್ಲಿ ನಡೆದಿದ್ದ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದರು. ಅಲ್ಲದೇ ಕೀರ್ತಿ ಕೊಲೆ ಪ್ರಕರಣದಲ್ಲೂ ಸಹ ಆರೋಪಿಯಾಗಿದ್ದರು. ಹೀಗೆ ಎರಡು ಕೊಲೆ ಪ್ರಕರಣ ಅವರ ಮೇಲಿದ್ದು, ಇನ್ನೂ ಕೆಲ ಕೊಲೆ ಯತ್ನ ಪ್ರಕರಣ ಸಹ ಆತನ ಮೇಲಿದೆ. ಹೀಗೆ ರೌಡಿ ಶೀಟರ್ ಆಗಿರುವ ಸುಹಾಸ್‌ಗೆ ಮೊದಲೇ ಕರೆದು ಎಚ್ಚರಿಕೆಯಿಂದಿರಿ ಹೇಳಿದ್ದೆವುʼ ಎಂದು ತಿಳಿಸಿದ್ದಾರೆ.




