ಕೊಚ್ಚಿ (PTI): ಧಾರ್ಮಿಕ ಕ್ಷೇತ್ರ ಶಬರಿ ಮಲೆಯ ಮಂಡಲ-ಮಕರವಿಳಕ್ಕು (ಮಕರ ಸಂಕ್ರಾಂತಿ) ಸಂದರ್ಭದಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಘನತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ವನ್ಯಜೀವಿ (ಸಂರಕ್ಷಣಾ) ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಜರುಗಿಸುವಂತೆ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಮತ್ತು ಮರಳೀ ಕೃಷ್ಣ ಅವರು ಇದ್ದ ಪೀಠವು 'ಕೆಲವರು ಪ್ಲಾಸ್ಟಿಕ್ ಚೀಲಗಳು, ಜೈವಿಕ ಪ್ರಕ್ರಿಯೆಗಳಿಂದ ಕೊಳೆಯಲಾಗದ ತ್ಯಾಜ್ಯಗಳು ಸೇರಿ ಘನತ್ಯಾಜ್ಯಗಳನ್ನು ಸುಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಸೂಚಿಸಿತು.




