HEALTH TIPS

ಮಣಿಪುರ ಗಲಭೆ ಪ್ರಕರಣದ ಆರೋಪಿ ತಲಶ್ಶೇರಿಯಲ್ಲಿ ಬಂಧನ ; ಇಂಫಾಲ ಮೂಲದ ರಾಜ್‍ಕುಮಾರ್ ಬಂಧಿತ ಶಂಕಿತ

ಕಣ್ಣೂರು: ಮಣಿಪುರ ಗಲಭೆ ಪ್ರಕರಣದ ಶಂಕಿತ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕಣ್ಣೂರಿನ ತಲಶ್ಶೇರಿಯಿಂದ ಬಂಧಿಸಿದೆ. ಇಂಫಾಲ ಮೂಲದ ರಾಜ್‍ಕುಮಾರ್ ಮೈಪಕ್ಷನ ನನ್ನು ಎನ್‍ಐಎ ಬಂಧಿಸಿದೆ. ರಾಜ್‍ಕುಮಾರ್ ತಲಶ್ಶೇರಿಯಲ್ಲಿ ಹೋಟೆಲ್ ಕೆಲಸಗಾರನಾಗಿ ತಲೆಮರೆಸಿಕೊಂಡಿದ್ದ.

ಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟುವ ತಪಾಸಣೆಯ ಭಾಗವಾಗಿರುವುದಾಗಿ ಹೇಳಿಕೊಂಡು ಎನ್.ಐ.ಎ ಆರೋಗ್ಯ ಕಾರ್ಯಕರ್ತರ ವೇಷದಲ್ಲಿ ಆಗಮಿಸಿತು. ಕಾರ್ಮಿಕರು ತಂಗಿದ್ದ ಕೊಠಡಿಗಳಿಗೆ ಹೋಗಿ ಶೋಧಿಸಿದಾಗ ರಾಜ್‍ಕುಮಾರ್ ನನ್ನು ಬಂಧಿಸಲಾಯಿತು. ಆತನ ಆಧಾರ್ ಕಾರ್ಡ್ ಮತ್ತು ಕೈಯಲ್ಲಿದ್ದ ಪೋಟೋ ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಯಿತು. ಅವನ ಕುತ್ತಿಗೆಯ ಮೇಲೆ, ಕಿವಿಯ ಕೆಳಗೆ ಇದ್ದ ವಿಶೇಷ ಹಚ್ಚೆ, ಎನ್.ಐ.ಎ. ಗೆ ಗುರುತಿಸುವಿಕೆಯನ್ನು ಸುಲಭಗೊಳಿಸಿತು.


ತನ್ನನ್ನು ಬಂಧಿಸಲಾಗಿದೆ ಎಂದು ತಿಳಿದಾಗ, ರಾಜ್‍ಕುಮಾರ್ ಅಧಿಕಾರಿಗಳ ಸೂಚನೆಗಳನ್ನು ಯಾವುದೇ ಅಭಿವ್ಯಕ್ತಿ ಬದಲಾಯಿಸದೆ ಪಾಲಿಸಿದನು. ರಾಜ್‍ಕುಮಾರ್ ದೀರ್ಘಕಾಲದವರೆಗೆ ಎನ್‍ಐಎಯ ಕಣ್ಗಾವಲಿನಲ್ಲಿದ್ದ. ರಾಜ್‍ಕುಮಾರ್ ನಿಷೇಧಿತ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯು.ಎನ್.ಎಲ್.ಎಫ್) ನಿಂದ ಸಶಸ್ತ್ರ ತರಬೇತಿ ಪಡೆದಿದ್ದಾನೆಂದು ಹೇಳಲಾಗಿದೆ.

ನಾಲ್ಕು ದಿನಗಳ ಹಿಂದೆ ರಾಜ್‍ಕುಮಾರ್ ಕೆಲಸಕ್ಕಾಗಿ ಹೋಟೆಲ್ ಅಧಿಕಾರಿಗಳನ್ನು ಸಂಪರ್ಕಿಸಿದ್ದ. ಆತ ಬೆಂಗಳೂರಿನ ಜಾಹೀರಾತನ್ನು ನೋಡಿ ಕರೆ ಮಾಡುತ್ತಿದ್ದ ಎಂದು ಹೇಳಿರುವನು. ಆತ ಮನೆಗೆಲಸಕ್ಕೆಂದು ಹೇಳಿದ್ದ. ಸಂಬಳವೂ ನಿಗದಿಯಾಗಿತ್ತು. ತಲಶ್ಶೇರಿ ತಲುಪಿದ ನಂತರ, ಆತ ಆಧಾರ್ ವಿವರಗಳನ್ನು ಹಸ್ತಾಂತರಿಸಿದ ಮತ್ತು ಮೂರು ದಿನಗಳ ಕಾಲ ಚೆನ್ನಾಗಿ ಕೆಲಸ ಮಾಡಿದ್ದ. ಹೆಚ್ಚು ಜನರೊಂದಿಗೆ ಮಾತನಾಡದೆ ಕೆಲಸ ಮಾಡುತ್ತಿದ್ದ ಆತನಿಗೆ ಈ ರೀತಿಯ ಇತಿಹಾಸವಿದೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಹೋಟೆಲ್‍ನೊಂದಿಗೆ ಸಂಬಂಧ ಹೊಂದಿದ್ದವರು ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries