ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ವಸ್ತು ವಿರೋಧಿ ಸಂದೇಶ ಯಾತ್ರೆಯು ಕಾಲಿಕ್ಕಡವಿನಲ್ಲಿ ಸಮಾರೋಪಗೊಂಡಿತು. ಸಮಾರೋಪ ಸಮಾರಂಭಗಳು ಹಬ್ಬದ ವಾತಾವರಣದಲ್ಲಿ ನಡೆದವು.
ಚೆರುವತ್ತೂರಿನಿಂದ ಆರಂಭವಾದ ವಾಕಥಾನ್ ನಂತರ ಕ್ರೀಡಾ ಸಚಿವ ವಿ.ಅಬ್ದುರಹ್ಮಾನ್ ಕಾಲಿಕಡವದಲ್ಲಿ ಸಮಾರೋಪ ಸಭೆಯನ್ನು ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಂ. ರಾಜಗೋಪಾಲನ್ ವಹಿಸಿದ್ದರು. ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಸೇರಿದಂತೆ ನಾನಾ ಕ್ರೀಡಾ ಸಂಸ್ಥೆಗಳ ಪ್ರತಿನಿಧಿಗಳು, ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಕ್ರೀಡಾ ವಿದ್ಯಾರ್ಥಿಗಳು, ಮೂರು ಹಂತದ ಪಂಚಾಯಿತಿ ಪ್ರತಿನಿಧಿಗಳು, ಕ್ರೀಡಾಪ್ರೇಮಿಗಳು ಇದ್ದರು.
ಕಾಲಿಕ್ಕಡವದಲ್ಲಿ ಕೇರಳ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಶರಫ್ ಅಲಿ, ಪಿಲಿಕೋಡು ಪಂಚಾಯತ್ ಅಧ್ಯಕ್ಷ ಪಿ.ಪಿ. ಪ್ರಸನ್ನಕುಮಾರಿ, ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ. ಸಜೀವನ್, ಚಲನಚಿತ್ರ ನಟ ಪಿ.ಪಿ. ಕುಂuಟಿಜeಜಿiಟಿeಜಕೃಷ್ಣನ್ ಮಾಸ್ಟರ್, ಸ್ಪೋಟ್ರ್ಸ್ ಕೌನ್ಸಿಲ್ ರಾಜ್ಯ ಪರಿಷತ್ ಸದಸ್ಯ ಟಿ.ವಿ.ಬಾಲನ್, ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷ ಟಿ.ವಿ.ಗೋವಿಂದನ್, ಸ್ನೇಹ ಸಂದೇಶ ಯಾತ್ರೆಯನ್ನು ಪಂಚಾಯತ್ ಮಾಜಿ ಅಧ್ಯಕ್ಷ ಟಿ.ವಿ.ಶ್ರೀಧರನ್ ಮಾಸ್ಟರ್, ಎಂ.ಕೆ.ರಾಜಶೇಖರನ್, ಎಂ.ಕೆ.ಹರಿದಾಸ್, ಮತ್ತಿತರರು ಸ್ವಾಗತಿಸಿದರು.
ಕಾಲಿಕಡವು ಮೈದಾನದಲ್ಲಿ ಅಲಮಿಕ್ಕಳ್ಳಿ ಜುಂಬಾ ನೃತ್ಯ ಮತ್ತು ವಿವಿಧ ಕ್ರೀಡಾ ಪ್ರದರ್ಶನಗಳು ನಡೆದವು.






