ಮುಳ್ಳೇರಿಯ: ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಮುಂಬೆ`ನ ಐಶ್ವರ್ಯಾ ಹರೀಶ್ ಅವರು ಸ್ವಾತಿ ತಿರುನಾಳ್ ಅವರ ಜೀವನ ಚರಿತ್ರೆಯನ್ನು ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು.
ಐಶ್ವರ್ಯಾ ಹರೀಶ್ ಸ್ವತಃ ಈ ಹಾಡನ್ನು ಬರೆದು ನಿರ್ದೇಶಿಸಿದರೆ, ಅವರ ಪತಿ ಹರೀಶ್ ಮುಂಬೆ` ಹಾಡನ್ನು ಹಾಡಿ ಸಂಗೀತ ಸಂಯೋಜಿಸಿದ್ದಾರೆ. ಅವರ ಮಗಳು ವರ್ಷಿಣಿ ಜತಿಯಲ್ಲಿ, ಪವನ್ ಮಾ`Àವ್ ಮೃದಂಗದಲ್ಲಿ ಮತ್ತು ಜಯರಾಮ್ ಬೆಂಗಳೂರು ಮೃದಂಗದಲ್ಲಿ ಸಹಕರಿಸಿದರು. ಅರ್ಜುನ್ ಶ್ಯಾಮಲಾ ಕಥೆ ನಿರೂಪಿಸಿದರು. ರಾಷ್ಟ್ರೀಯ ನೃತ್ಯೋತ್ಸವದ ಏಳನೇ ದಿನದಂದು ಎರ್ನಾಕುಲಂನ ಅಭಿರಾಮಿ ನವೀನ್, ಅತಿರಾ ಶಂಕರ್, ಮ`Àುರ್ ಸಹೋದರಿಯರಾದ ಸ್ಪೂರ್ತಿ ಮತ್ತು ಪ್ರೀತಿ, ಬೆಂಗಳೂರಿನ ಮಮತಾ ಪೆ` ಮತ್ತು ಶ್ರಾವ್ಯ, ಕಾಸರಗೋಡು ಜಿಲ್ಲೆಯ ಚೆ`ತ್ರಾ ಮತ್ತು ಅವರ ತಂಡ, ಮಾಳವಿಕಾ, ಋತುನಂದನ, ಮತ್ತು ಶ್ರುತಿ ಸಂಗೀತ, ವಾಗೆಯ ನೃತ್ಯ ಗೋವಿಯಸ್ ವಿದ್ಯಾಲಯದ ವಿದ್ಯಾರ್ಥಿನಿಯರು, ಜಿ. ಅನಘಾ ಮಿಹಿರ ಸಹೋದರಿಯರಾದ ದೇವಿಕಾ ಸಜೀವನ್ ಮತ್ತು ರಾಕಾ ಕಲ್ಲೂರಾಯ ಅವರು `Àರತನಾಟ್ಯ ಪ್ರದರ್ಶಿಸಿದರೆ, ಕ್ಷೇತ್ರ ಕಲಾ ಅಕಾಡೆಮಿ ಮಡೆ`ಕಾವು ಮೋಹಿನಿಯಾಟ್ಟಂ, ಮತ್ತು ಎರ್ನಾಕುಲಂನ ಅಂಜನಾ ಆನಂದ್ ಅವರು ಗೋಶಾಲಾ ನಂದಿ ಮಂಟಪದಲ್ಲಿ ಕೂಚುಪುಡಿ ಪ್ರದರ್ಶಿಸಿದರು. ಪರಂಪರಾ ವಿದ್ಯಾಪೀಠದಿಂದ ಜಿಲ್ಲಾ ನೃತ್ಯ ಶಿಕ್ಷಕಿ ರೆಗ್ಗಿ ಜಾನ್ ಮಾರ್ಟಿನ್ ಅವರನ್ನು ಸನ್ಮಾನಿಸಲಾಯಿತು.
ಇಂದು(ಮೇ.8) ನೃತ್ಯೋತ್ಸವದಲ್ಲಿ - ಪ್ರತಿಭಾ ಕಿಣಿ, ಕಾರ್ತಿಕ್ ಮಣಿಕಾಂತನ್, ಶಾರ್ವರಿ ಮಾಯಾ, ದೇವಿಕಾ ಕೆ.ಎಂ., ಗುಜರಾತಿನ ದೇವಾಂಶಿ ಸೋಂಪುರ, ಖ್ಯಾತ ನರ್ತಕ ಪಾಶ್ರ್ವನಾಥ ಉಪಾ`Á್ಯಯ ಮತ್ತು ನಾಯರ್ ಸಹೋದರಿಯರಿಂದ ಭರತನಾಟ್ಯ, ನಯನಾ ನಾರಾಯಣನ್, ಗಾಯತ್ರಿ ಗಿರಿಧರ್, ಮತ್ತು ಅಶ್ವತಿ ಕೃಷ್ಣ ಅವರು ಮೋಹಿನಿಯಾಟ್ಟಂ, ಶಮಾ ಮತ್ತು ಶಾರ್ವಿ ರಾಗೇಶ್, ಪರಮೇಶ್ವರಿ ರಾಗೇಶ್ ಕೂಚ್ಚಿಪುಡಿ ನಡೆಸಿಕೊಡಲಿದ್ದಾರೆ.





