ಕೊಚ್ಚಿ: ತ್ರಿಶೂರ್ ಕರುವನ್ನೂರ್ ಬ್ಯಾಂಕ್ ವಂಚನೆ ಪ್ರಕರಣದ ಅಂತಿಮ ಆರೋಪಪಟ್ಟಿಯಲ್ಲಿ ತ್ರಿಶೂರ್‍ನ ಸಿಪಿಎಂನ ಹಿರಿಯ ನಾಯಕರನ್ನು ಸೇರಿಸಲಾಗಿದೆ.
ಸಿಪಿಎಂನ ಮಾಜಿ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಎಂ. ವರ್ಗೀಸ್, ಎ.ಸಿ. ಮೊಯ್ದೀನ್, ಮತ್ತು ಕೆ. ರಾಧಾಕೃಷ್ಣನ್ ಪ್ರತಿವಾದಿಗಳ ಪಟ್ಟಿಯಲ್ಲಿದ್ದಾರೆ. ಇದರ ಜೊತೆಗೆ, ಸಿಪಿಎಂ ಅನ್ನು ಸಹ ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಕೊಚ್ಚಿಯ ಪಿಎಂಎಲ್‍ಎ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಅಂತಿಮ ಆರೋಪಪಟ್ಟಿಗೆ 27 ಹೊಸ ಆರೋಪಿಗಳನ್ನು ಸೇರಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 83 ಕ್ಕೆ ಏರಿದೆ. ಇಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಗಳು ವಂಚನೆಯ ಮೂಲಕ 180 ಕೋಟಿ ರೂ. ಗಳಿಸಿದ್ದಾರೆ ಎಂದು ಹೇಳಲಾಗಿದೆ. ಸಿಪಿಎಂನ ಕಪ್ಪು ಹಣದ ವಹಿವಾಟುಗಳನ್ನು ರಹಸ್ಯ ಬ್ಯಾಂಕ್ ಖಾತೆಗಳ ಮೂಲಕ ನಡೆಸಲಾಗಿದೆ ಎಂದು ಇಡಿ ವರದಿ ಹೇಳುತ್ತದೆ.
ಸಿಪಿಎಂ ಜಿಲ್ಲಾ ನಾಯಕತ್ವದ ಅರಿವಿನಿಂದಲೇ ಕಪ್ಪು ಹಣದ ವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಪತ್ತೆಮಾಡಿದೆ. ಕಪ್ಪು ಹಣದ ವಹಿವಾಟು ನಡೆದ ರಹಸ್ಯ ಖಾತೆಗಳ ಬಗ್ಗೆ ಆದಾಯ ತೆರಿಗೆ ರಿಟನ್ರ್ಸ್‍ನಲ್ಲಿ ಯಾವುದೇ ಮಾಹಿತಿ ಇರಲಿಲ್ಲ ಎಂದು ಇಡಿ ವರದಿ ಹೇಳುತ್ತದೆ.






