ಕಣ್ಣೂರು: ಪಯ್ಯವೂರಿನಲ್ಲಿ ಯುವಕನೊಬ್ಬನನ್ನು ಮನೆಯಲ್ಲೇ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಕಾಂಜಿರಕೊಲ್ಲಿ ಮೂಲದ ನಿಧೀಶ್ ಎಂದು ಗುರುತಿಸಲಾಗಿದೆ.
ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ನಿಧೀಶ್ ಅವರ ಪತ್ನಿ ಶ್ರುತಿ ಗಾಯಗೊಂಡಿದ್ದಾರೆ. ನಿಧೀಶ್ ಒಬ್ಬ ಕಮ್ಮಾರ. ದಾಳಿ ನಡೆಸಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.





