HEALTH TIPS

ಪರ್ಸನಲ್ ಲೋನ್: ಮೇಲ್ನೋಟಕ್ಕೆ ಗೊತ್ತಾಗದ ಶುಲ್ಕಗಳು ಹಲವು; ನೀವು ತಿಳಿದಿರಬೇಕಾದ ಸಂಗತಿಗಳಿವು..

ವ್ಯೆಯಕ್ತಿಕ    ಸಾಲ ಅಥವಾ ಪರ್ಸನಲ್ ಲೋನ್ (Personal Loan) ಬಹಳ ಹೆಚ್ಚು ತೆಗೆದುಕೊಳ್ಳಲಾಗುವ ಸಾಲ ಎನಿಸಿದೆ. ತಾತ್ಕಾಲಿಕವಾಗಿ ಹಾಗೂ ತುರ್ತಾಗಿ ಹಣದ ಅಗತ್ಯ ಬಿದ್ದಾಗ ಸಾಮಾನ್ಯವಾಗಿ ಜನರು ಪರ್ಸನಲ್ ಲೋನ್​​ನ ಮೊರೆ ಬೀಳುತ್ತಾರೆ. ಬಡ್ಡಿ ತುಸು ಅಧಿಕ ಇದ್ದರೂ ಇಎಂಐ ಎನ್ನುವ ಸುಲಭ ಮಾರ್ಗ ಇದ್ದೇ ಇರುವುದರಿಂದ ಮಧ್ಯಮ ವರ್ಗದವರಿಗೆ ಇದು ಫೇವರಿಟ್ ಲೋನ್ ಎನಿಸಬಹುದು.

ಆದರೆ, ಈ ಸಾಲಕ್ಕೆ ಅಧಿಕ ಬಡ್ಡಿ ಇರುವುದರ ಜೊತೆಗೆ ಮೇಲ್ನೋಟಕ್ಕೆ ಅಷ್ಟಾಗಿ ಗಮನಕ್ಕೆ ಬಾರದ ಹಲವು ಶಿಲ್ಕಗಳೂ ಇರುತ್ತವೆ. ಅಂತಿಮವಾಗಿ ಇವು ವ್ಯಕ್ತಿಯ ಸಾಲದ ಹೊರೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ, ವೈಯಕ್ತಿಕ ಸಾಲದ ಜೊತೆ ಇರುವ ಇತರ ಕೆಲ ಶುಲ್ಕಗಳ ಬಗ್ಗೆ ಮಾಹಿತಿ ಇಲ್ಲಿದೆ…

ಪರ್ಸನಲ್ ಲೋನ್: ಪ್ರೋಸಸಿಂಗ್ ಫೀಸ್

ಪ್ರೋಸಸಿಂಗ್ ಫೀ ಎಂಬುದು ಪರ್ಸನಲ್ ಲೋನ್ ಮಾತ್ರವಲ್ಲ, ಬಹುತೇಕ ಎಲ್ಲಾ ವಿಧದ ಸಾಲಗಳಿಗೂ ವಿಧಿಸಲಾಗುವ ಶುಲ್ಕ. ಸಾಮಾನ್ಯವಾಗಿ ಸಾಲದ ಶೇ. 2ರಿಂದ 6ರವರೆಗಿನ ಮೊತ್ತವನ್ನು ಶುಲ್ಕವಾಗಿ ಪಡೆಯಲಾಗುತ್ತದೆ. ಶೇ. 5ರಷ್ಟು ಪ್ರೋಸಸಿಂಗ್ ಫೀ ಇದ್ದಲ್ಲಿ ನೀವು ಒಂದು ಲಕ್ಷ ರೂ ಸಾಲ ಪಡೆದಾಗ 5,000 ರೂ ಅನ್ನು ಶುಲ್ಕವಾಗಿ ಮುರಿದುಕೊಳ್ಳಲಾಗುತ್ತದೆ. ಇದರ ಜೊತೆಗೆ ಸ್ಟ್ಯಾಂಪ್ ಡ್ಯೂಟಿ ಇತ್ಯಾದಿ ವೆಚ್ಚಗಳನ್ನೂ ನಿಮ್ಮಿಂದಲೇ ಭರಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಪ್ರೋಸಸಿಂಗ್ ಫೀ ಕೈಬಿಡುವಂತೆ ಬ್ಯಾಂಕ್​​ಗೆ ಮನವಿ ಮಾಡಬಹುದು.

ಪರ್ಸನಲ್ ಲೋನ್: ವೆರಿಫಿಕೇಶನ್ ಶುಲ್ಕ

ನೀವು ಪರ್ಸನಲ್ ಲೋನ್​​ಗೆ ಅರ್ಜಿ ಹಾಕಿದಾಗ ಬ್ಯಾಂಕ್​​ನವರು ನಿಮ್ಮ ಕ್ರೆಡಿಟ್ ರೇಟಿಂಗ್ ಪರಿಶೀಲಿಸಲು ಏಜೆನ್ಸಿಗಳ ನೆರವು ಪಡೆಯುತ್ತವೆ. ಇದಕ್ಕೆ ಬ್ಯಾಂಕ್​​ಗೆ ತುಸು ವೆಚ್ಚವಾಗುತ್ತದೆ. ಆ ಹೊರೆಯನ್ನು ಗ್ರಾಹಕರಾದ ನಿಮಗೆ ವರ್ಗಾಯಿಸಲಾಗುತ್ತದೆ. ಅದನ್ನೇ ವೆರಿಫಿಕೇಶನ್ ಚಾರ್ಜಸ್ ಎನ್ನುವುದು.

ಪರ್ಸನಲ್ ಲೋನ್: ಕಲೆಕ್ಷನ್ ಚಾರ್ಜಸ್

ನೀವು ಸಾಲದ ಕಂತುಗಳನ್ನು ಚೆಕ್ ರೂಪದಲ್ಲಿ ಕಟ್ಟುತ್ತಿದ್ದರೆ, ನಿಮ್ಮ ನಿವಾಸದಿಂದ ಚೆಕ್ ಪಿಕಪ್ ಮಾಡಿಕೊಳ್ಳುವ ಅವಕಾಶವನ್ನು ಬ್ಯಾಂಕ್ ನೀಡಬಹುದು. ಆದರೆ, ಇದಕ್ಕೆ ಕಲೆಕ್ಷನ್ ಅಥವಾ ಇಎಂಐ ಪಿಕಪ್ ಶುಲ್ಕ ವಿಧಿಸಲಾಗುತ್ತದೆ.

ಪರ್ಸನಲ್ ಲೋನ್: ಬೌನ್ಸ್ ಚಾರ್ಜಸ್

ನೀವು ಚೆಕ್ ಮೂಲಕ ಇಎಂಐ ಪಾವತಿಸುತ್ತಿದ್ದು, ಆ ಚೆಕ್ ಸರಿಯಾಗಿ ಕ್ರೆಡಿಟ್ ಆಗದೇ ಹೋದರೆ, ಅಥವಾ ಬೌನ್ಸ್ ಆದರೆ ಆಗ ಬ್ಯಾಂಕ್​​ನವರು ಪೇಮೆಂಟ್ ರಿಟರ್ನ್ ಚಾರ್ಜ್ ವಿಧಿಸಬಹುದು.

ಪರ್ಸನಲ್ ಲೋನ್: ಇಎಂಐ ತಡಪಾವತಿ ದಂಡ

ಇಎಂಐ ಕಟ್ಟಲು ಒಂದು ದಿನಾಂಕವನ್ನು ಗಡುವಾಗಿ ನಿಗದಿ ಮಾಡಲಾಗುತ್ತದೆ. ಈ ದಿನದೊಳಗೆ ಪಾವತಿಸದಿದ್ದರೆ ತಡ ಪಾವತಿ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.

ಪರ್ಸನಲ್ ಲೋನ್: ಇಎಂಐ ಪಾವತಿ ವಿಧಾನ ಬದಲಾದರೆ ಶುಲ್ಕ

ನೀವು ಇಎಂಐ ಪಾವತಿಸುವ ವಿಧ ಬದಲಾಯಿಸಿದರೆ ಅದಕ್ಕೆ ಶುಲ್ಕ ಇರುತ್ತದೆ. ಉದಾಹರಣೆಗೆ, ಇಎಂಐ ಸ್ವಯಂಕಡಿತ ಆಗುವ ಬ್ಯಾಂಕ್ ಅಕೌಂಟ್​​​ನಲ್ಲಿ ಬದಲಾವಣೆ, ಅಥವಾ ಇಎಂಐ ದಿನಾಂಕದಲ್ಲಿ ಬದಲಾವಣೆಯೋ ಮಾಡಿದರೆ ಶುಲ್ಕ ವಿಧಿಸಲಾಗುತ್ತದೆ.

ಪರ್ಸನಲ್ ಲೋನ್: ಭಾಗಶಃ ಮರುಪಾವತಿ ಶುಲ್ಕ

ಸಾಲವನ್ನು ಬೇಗ ಮುಗಿಸಲು ರೆಗ್ಯುಲರ್ ಇಎಂಐಗಿಂತ ಒಂದಷ್ಟು ಹೆಚ್ಚುವರಿ ಹಣವನ್ನು ನೀವು ಪಾವತಿಸಿದರೆ ಅದಕ್ಕೆ ಪಾರ್ಶಿಯಲ್ ರೀಪೇಮೆಂಟ್ ಎಂದು ಪ್ರತ್ಯೇಕ ಶುಲ್ಕ ಹಾಕಲಾಗುತ್ತದೆ.

ಪರ್ಸನಲ್ ಲೋನ್: ಮುಂಗಡವಾಗಿ ಸಾಲ ಮುಕ್ತಾಯಕ್ಕೆ ಶುಲ್ಕ

ನೀವು ಸಾಲವನ್ನು ನಿಗದಿತ ತಿಂಗಳುಗಳಿಂತ ಮುಂಚಿತವಾಗಿ ಮುಗಿಸಿದರೆ ಅದನ್ನು ಲೋನ್ ಫೋರ್​​​ಕ್ಲೋಶರ್ ಎನ್ನುತ್ತಾರೆ. ಇದರಿಂದ ಬ್ಯಾಂಕ್​​​ಗೆ ನಿಶ್ಚಿತ ಬಡ್ಡಿ ಆದಾಯ ಕೈತಪ್ಪುವುದರಿಂದ ಅದಕ್ಕೆ ಪರಿಹಾರವಾಗಿ ಶುಲ್ಕ ವಿಧಿಸಬಹುದು.

ಪರ್ಸನಲ್ ಲೋನ್: ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಪರ್ಸನಲ್ ಲೋನ್ ವಿವರ ಇರುವ ಡೂಪ್ಲಿಕೇಟ್ ಸ್ಟೇಟ್ಮೆಂಟ್ ಅನ್ನು ಪಡೆಯಲು ನೀವು ನಿರ್ದಿಷ್ಟ ಶುಲ್ಕ ನೀಡಬೇಕಾಗಬಹುದು.

ಪರ್ಸನಲ್ ಲೋನ್: ಕ್ಯಾಷ್ ಟ್ರಾನ್ಸಾಕ್ಷನ್ ಚಾರ್ಜಸ್

ನೀವು ಬ್ಯಾಂಕ್ ಕಚೇರಿಗೆ ಹೋಗಿ ಇಎಂಐ ಅನ್ನು ಕ್ಯಾಷ್​​ನಲ್ಲಿ ಪಾವತಿಸುವಾಗ ಕ್ಯಾಷ್ ಟ್ರಾನ್ಸಾಕ್ಷನ್ ಚಾರ್ಜ್ ವಿಧಿಸಲಾಗುತ್ತದೆ.

ಪರ್ಸನಲ್ ಲೋನ್: ಕ್ಯಾನ್ಸಲೇಶನ್ ಚಾರ್ಜಸ್

ಸಾಲ ಮಂಜೂರಾದ ಬಳಿಕ ನಿಮಗೆ ಅದು ಬೇಕಿಲ್ಲ ಎಂದಾದಲ್ಲಿ ರದ್ದುಮಾಡುವ ಅವಕಾಶ ಇರುತ್ತದೆ. ಆದರೆ, ಇದಕ್ಕೆ ಕ್ಯಾನ್ಸಲೇಶನ್ ಚಾರ್ಜ್ ಹಾಕಲಾಗುತ್ತದೆ. ಸಾಲ ಮಂಜೂರು ಆದ ದಿನದಿಂದ ಹಿಡಿದು ರದ್ದುಗೊಳಿಸಲಾದ ದಿನದವರೆಗೂ ಅಷ್ಟು ದಿನಕ್ಕೆ ಬಡ್ಡಿ ಹಾಕಲಾಗುತ್ತದೆ. ಲೋನ್ ಪ್ರೋಸಸಿಂಗ್ ಫೀ, ಸ್ಟ್ಯಾಂಪ್ ಡ್ಯೂಟಿ ಇತ್ಯಾದಿ ಶುಲ್ಕಗಳನ್ನು ಹಾಕಲಾಗುತ್ತದೆ.

ಮೇಲೆ ತಿಳಿಸಲಾದ ವಿವಿಧ ಶುಲ್ಕಗಳಿಗೆ ಜಿಎಸ್​​ಟಿ ಅನ್ವಯ ಆಗುತ್ತದೆ. ಇದರಲ್ಲಿ ಹೆಚ್ಚಿನ ಶುಲ್ಕಗಳ ವಿಚಾರ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಸಾಲದ ಹಣ, ಇಎಂಐ ಮತ್ತು ಬಡ್ಡಿಯಷ್ಟೇ ಎಲ್ಲರ ಚಿತ್ತದಲ್ಲಿರುತ್ತದೆ. ಇಂಥ ಶುಲ್ಕಗಳು ನಮಗೆ ಗೊತ್ತಿಲ್ಲದಂತೆ ಸಾಲದ ಹೊರೆಯನ್ನು ಹೆಚ್ಚಿಸಬಹುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries