ಕೊಚ್ಚಿ: ಹುಲಿಹಲ್ಲು ವಶದಲ್ಲಿರಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ರ್ಯಾಪರ್ ತಾರೆ ವೇಡನ್ ನಿಗೆ ಅಚ್ಚರಿ ಎಂಬಂತೆ ನಿನ್ನೆ ಜಾಮೀನು ನೀಡಲಾಗಿದೆ. ಜಾಮೀನು ಪಡೆದ ನಂತರ, ರ್ಯಾಪರ್ ವೇಡನ್ ಪ್ರತಿಕ್ರಿಯಿಸಿ, ಧೂಮಪಾನ ಮತ್ತು ಮದ್ಯಪಾನ ಒಳ್ಳೆಯ ಅಭ್ಯಾಸವಲ್ಲ, ಮತ್ತು ತಾನು ಎಲ್ಲವನ್ನೂ ಬದಲಾಯಿಸಿಕೊಳ್ಳಬೇಕಿದೆ ಮತ್ತು ಉತ್ತಮ ವ್ಯಕ್ತಿಯಾಗಬಹುದೇ ಎಂದು ನೋಡಬೇಕು ಎಂದು ಹೇಳಿದ.
ಹುಲಿಹಲ್ಲು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ. ತನ್ನಂತೆ ಯಾರೂ ಮಾದಕ ದ್ರವ್ಯ ಸೇವನೆ ಮತ್ತು ಮದ್ಯದ ಹಾದಿಯನ್ನು ಹಿಡಿಯಬೇಡಿ ಎಂದು ಕೇಳಿಕೊಂಡನು. ತನ್ನ ಪ್ರಮಾದಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸರಿಪಡಿಸುತ್ತೇನೆ ಎಂದು ಹೇಳಿದನು.
ಹುಲಿ ಹಲ್ಲು ಪ್ರಕರಣದಲ್ಲಿ ಪೆರುಂಬವೂರು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿನ್ನೆ ಬೇಡನ್ ಗೆ ಜಾಮೀನು ನೀಡಿದೆ. ಅದು ನಿಜವಾದ ಹುಲಿಯ ಹಲ್ಲು ಎಂದು ತನಗೆ ತಿಳಿದಿರಲಿಲ್ಲ ಎಂದು ವೇಡನ್ ತಿಳಿಸಿದ. ಆ ಹಲ್ಲು ಉಡುಗೊರೆಯಾಗಿ ವೇಡನ್ ಪಡೆದಿದ್ದು, ಅದು ನಿಜವಾದ ಹುಲಿಯ ಹಲ್ಲು ಎಂದು ತಿಳಿದಿದ್ದರೆ ಅದನ್ನು ಬಳಸುತ್ತಿರಲಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ಹೇಳಿದರು. ನಾಳೆ ಯಾರಿಗಾದರೂ ಇದು ಸಂಭವಿಸಬಹುದು ಮತ್ತು ಅದು ಹುಲಿಯ ಹಲ್ಲು ಎಂದು ನಿರ್ಧರಿಸಲು ಯಾವುದೇ ವೈಜ್ಞಾನಿಕ ಪರೀಕ್ಷೆಯನ್ನು ನಡೆಸಲಾಗಿಲ್ಲ ಎಂದು ವೇಡನ್ ಪರ ವಕೀಲರು ನ್ಯಾಯಾಲಯದಲ್ಲಿ ಗಮನಸೆಳೆದರು.
ಅರಣ್ಯ ಇಲಾಖೆ ಜಾಮೀನು ಅರ್ಜಿಯನ್ನು ವಿರೋಧಿಸಿ ನ್ಯಾಯಾಲಯದಲ್ಲಿ ವೇಡನ್ ಜಿಲ್ಲೆ ಬಿಟ್ಟು ಹೋಗಿ ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ವಾದಿಸಿತು. ಆದರೆ, ವೇಡನ್ ನ್ಯಾಯಾಲಯಕ್ಕೆ ತಿಳಿಸಿದ ಪ್ರಕಾರ, ತನಗೆ ಉಡುಗೊರೆ ನೀಡಿದ ವ್ಯಕ್ತಿಯನ್ನು ತಾನು ಒಮ್ಮೆ ಮಾತ್ರ ಭೇಟಿಯಾಗಿದ್ದೇನೆ ಮತ್ತು ಮತ್ತೆ ನೋಡಿದರೆ ಅವನನ್ನು ಗುರುತಿಸುವೆನೋ ಇಲ್ಲವೋ ಎಂಬುದು ಕೂಡ ತಿಳಿದಿಲ್ಲ ಎಂದು ಹೇಳಿಕೊಂಡ. ತನಿಖಾ ಅಧಿಕಾರಿಗಳು ಆ ವ್ಯಕ್ತಿಯನ್ನು ಹುಡುಕಲು ಬಯಸುವಲ್ಲೆಲ್ಲಾ ಅವರೊಂದಿಗೆ ಹೋಗಲು ಸಿದ್ಧನಿದ್ದೇನೆ ಎಂದು ವೇಡನ್ ಹೇಳಿದನು.






