ಕೊಲ್ಲಂ: ಆರ್‍ಎಸ್‍ಎಸ್ ನಾಯಕ ಪಟ್ಟತ್ತಾನಂ ಸಂತೋಷ್ ಕೊಲೆ ಪ್ರಕರಣದ ಎರಡನೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಡಕ್ಕೆವಿಲ ಪಟ್ಟತಾನಂ ನಿವಾಸಿ ಡಿವೈಎಫ್‍ಐ ಮುಖಂಡ ಕಾಳಿ ಸಜೀವ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 2 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ತೀರ್ಪನ್ನು ಕೊಲ್ಲಂ 4ನೇ ಸೆಷನ್ಸ್ ನ್ಯಾಯಾಲಯ ನೀಡಿದೆ. ಪ್ರಕರಣದ ಇತರ ಆರೋಪಿಗಳಿಗೆ ಈ ಹಿಂದೆ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು.
1997ರ ನವೆಂಬರ್ 24 ರಂದು ಆರ್‍ಎಸ್‍ಎಸ್ ಕಾರ್ಯಕರ್ತ ಸಂತೋಷ್ ಅವರನ್ನು ಕೊಲೆಗೈಯ್ಯಲಾಗಿತ್ತು. ಪ್ರಮುಖ ಆರ್‍ಎಸ್‍ಎಸ್ ಮಂಡಲ ಸೇವಾ ಪ್ರಮುಖಕರಾಗಿದ್ದ ಸಂತೋಷ್ ಶಾಖೆ ಮುಗಿಸಿ ಸೈಕಲ್‍ನಲ್ಲಿ ತೆರಳುತ್ತಿದ್ದಾಗ ಸಿಪಿಎಂ ಕಾರ್ಯಕರ್ತರ ಗುಂಪೆÇಂದು ಆಗಮಿಸಿತು. ಸೈಕಲ್ ತುಳಿಯುತ್ತಿದ್ದಾಗ ಕಾರಿನಿಂದ ಡಿಕ್ಕಿ ಹೊಡೆದು ಅವರನ್ನು ಬರ್ಬರವಾಗಿ ಕೊಚ್ಚಿ ಕೊಲ್ಲಲಾಯಿತು. ಪ್ರಕರಣದ ಆರಂಭಿಕ ವಿಚಾರಣೆಯ ಸಮಯದಲ್ಲಿ, ಎರಡನೇ ಆರೋಪಿ ಡಿವೈಎಫ್‍ಐ ನಾಯಕ ಕಲಿ ಸಜೀವ್ ತಲೆಮರೆಸಿಕೊಂಡಿದ್ದ. ವರ್ಷಗಳ ನಂತರ ಅವನು ಪೋಲೀಸರ ಕೈಗೆ ಸಿಕ್ಕಿಬಿದ್ದ.
ಪ್ರಕರಣದ ಇತರ ಆರೋಪಿಗಳನ್ನು ಈ ಹಿಂದೆ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಪ್ರಸ್ತುತ ಎರವಿಪುರಂ ಶಾಸಕರಾಗಿರುವ ಎಂ. ನೌಶಾದ್ ಅವರನ್ನು ಈ ಹಿಂದೆ ಜಿಲ್ಲಾ ನ್ಯಾಯಾಲಯವು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿತ್ತು. ನಂತರ ಹೈಕೋರ್ಟ್‍ನಲ್ಲಿ ಸಲ್ಲಿಸಲಾದ ಮೇಲ್ಮನವಿಯಲ್ಲಿ ಅವರನ್ನು ವಿಚಾರಣೆಯಿಂದ ಖುಲಾಸೆಗೊಳಿಸಲಾಯಿತು.





.webp)
