ಮಲಪ್ಪುರಂ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಅರಣ್ಯದಲ್ಲಿ ಮಲಪ್ಪುರಂ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ಪತ್ತೆಯಾಗಿದೆ. ಮನ್ನಾಕ್ರ್ಕಾಡ್ ಮೂಲದ ಕರುವಂತೋಡಿ ಮಹಮ್ಮದ್ ಶಾನಿಬ್ (28) ಮೃತದೇಹ ಪತ್ತೆಯಾಗಿದೆ.
ಮಂಗಳವಾರ ರಾತ್ರಿ ಗುಲ್ಮಾರ್ಗ್ ಠಾಣೆಯಿಂದ ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ಲಭಿಸಿರುವುದಾಗಿ ತಿಳಿದುಬಂದಿದೆ. ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್ ನಿಂದ ಈ ಪ್ರದೇಶ 25 ಕಿಲೋಮೀಟರ್ ದೂರದಲ್ಲಿದೆ, ಶನಿಬ್ ಪುಲ್ವಾಮಾ ಅರಣ್ಯ ಪ್ರದೇಶಕ್ಕೆ ಏಕೆ ಬಂದನು ಎಂಬುದರ ಕುರಿತು ವಿವರವಾದ ತನಿಖೆ ನಡೆಯುತ್ತಿದೆ. ಪೋಲೀಸರು ಮೃತದೇಹ ಸುಮಾರು ಹತ್ತು ದಿನಗಳಷ್ಟು ಹಳೆಯದು ಎಂದು ಹೇಳಿದ್ದಾರೆ.
ಶಾನಿಬ್ ಬೆಂಗಳೂರಿನಲ್ಲಿ ವೈರಿಂಗ್ ತಂತ್ರಜ್ಞ ಎಂದು ವರದಿಯಾಗಿದೆ. ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ಯುವಕ ಕಾಶ್ಮೀರಕ್ಕೆ ಹೇಗೆ ಬಂದನು ಎಂಬುದರ ಬಗ್ಗೆಯೂ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.





