ತಿರುವನಂತಪುರಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಭೇಟಿಯನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಪೊಲೀಸರು ದೇವಸ್ವಂ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿಗಳು ಮೇ 18 ಮತ್ತು 19 ರಂದು ಆಗಮಿಸುತ್ತಾರೆ ಎಂದು ತಿಳಿಸಲಾಗಿತ್ತು. ದೇವಸ್ವಂ ಮಂಡಳಿಯ ಸಹಯೋಗದೊಂದಿಗೆ ಪೊಲೀಸರು ಇದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದ್ದರು. ದೇವಸ್ವಂ ಮಂಡಳಿಯು ವರ್ಚುವಲ್ ಕ್ಯೂ ಬುಕಿಂಗ್ ಸೇರಿದಂತೆ ವಿಷಯಗಳಲ್ಲಿ ನಿರ್ಬಂಧಗಳನ್ನು ವಿಧಿಸಿತ್ತು. ಈ ನಿರ್ಬಂಧಗಳನ್ನು ಈಗ ಬದಲಾಯಿಸಲಾಗಿದೆ.
18 ರಂದು ಕುಮಾರಕಂನ ಕೊಟ್ಟಾಯಂಗೆ ಆಗಮಿಸಲಿದ್ದ ರಾಷ್ಟ್ರಪತಿಗಳು ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ನಿಲಯ್ಕಲ್‌ಗೆ ಆಗಮಿಸಿ, ಅಲ್ಲಿಂದ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಹಿಂತಿರುಗುವುದು ಯೋಜನೆಯಾಗಿತ್ತು.
ರಾಷ್ಟ್ರಪತಿಗಳ ಶಬರಿಮಲೆ ಭೇಟಿ ರದ್ದು ಯಾಕೆಂಬುದು ನಿಖರಪಡಿಸಲಿಲ್ಲವಾದರೂ, ಪಾಕಿಸ್ತಾನದೊಂದಿಗಿನ ಕದನ ಕಾರಣ ಇರಬೇಕೆಂದು ಅಂದಾಜಿಸಲಾಗಿದೆ.




