ಕಾಸರಗೋಡು: ಕೇರಳದಲ್ಲಿ ಸಾಮಾನ್ಯ ಸರ್ಕಾರಿ ನೌಕರರಿಗೆ ದೊರೆಯುತ್ತಿದ್ದ ವೇತನ ಪರಿಷ್ಕರಣೆ, ಕ್ಷಾಮ ಭತ್ಯೆ, ಲೀವ್ ಸರಂಡರ್, ಪರಿಹಾರ ಉದ್ಯೋಗ ಯೋಜನೆ ಸೇರಿದಂತೆ ಸವಲತ್ತುಗಳನ್ನು ಕಸಿದುಕೊಂಡು ಸರ್ಕಾರಿ ನೌಕರರ ಸೇವಾ ವೇತನ ವ್ಯವಸ್ಥೆಯನ್ನು ಎಡ ಸರ್ಕಾರ ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಾಜ್ಯ ನೌಕರರ ಸಂಘ (ಎಸ್‍ಇಯು) ಕಾಸರಗೋಡು ಜಿಲ್ಲಾ ಸಮ್ಮೇಳನ ತಿಳಿಸಿದೆ.
ಅಶ್ರಫ್ ಅತ್ತೂಟ್ಟಿ ನಗರದಲ್ಲಿ ನಡೆದ ಸಮ್ಮೇಳನವನ್ನು ಐಯುಎಂಎಲ್ ಜಿಲ್ಲಾಧ್ಯಕ್ಷ ಕಲ್ಲತ್ರ ಮಾಹಿನ್ ಹಾಜಿ ಉದ್ಘಾಟಿಸಿದರು. ಎಸ್. ಇ. ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀರ್ ಕೋಡೂರು ಮುಖ್ಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಮುಹಮ್ಮದಾಲಿ ಕೆ.ಎನ್.ಪಿ ಅಧ್ಯಕ್ಷತೆ ವಹಿಸಿದ್ದರು. ಕೋಟ್ಯಂತರ ರೂ. ಖರ್ಚು ಮಾಡಿ ಸರ್ಕಾರ ತನ್ನ ವಾರ್ಷಿಕೋತ್ಸವ ನಡೆಸುವ ಮೂಲಕ ಬಡ ಜನರ ತೆರಿಗೆ ಹಣವನ್ನು ಪೋಲುಮಾಡುತ್ತಿದೆ. ಇನ್ನೊಂದೆಡೆ ಸರ್ಕಾರಿ ನೌಕರರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ನೀಡದೆ ವಂಚಿಸುತ್ತಿರುವ ಕ್ರಮ ಖಂಡನೀಯ ಎಂದು ಸಮ್ಮೇಳನ ಅಭಿಪ್ರಾಯಪಟ್ಟಿದೆ. ಈ ಸಂದರ್ಭ 'ಹೋರಾಟ-ಬದುಕು-ವಿಮೋಚನೆ" ವಿಷಯದ ಕುರಿತು ಆಯೋಜಿಸಲಾದ ವಿಚಾರ ಸಂಕಿರಣವನ್ನು ರಾಜ್ಯ ಸಮಿತಿಕೋಶಾಧಿಕಾರಿ ನಾಸರ್ ನಂಗರತ್ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಓ.ಎಂ. ಶೆಫೀಕ್ ವಿಷಯದ ಮಂಡಿಸಿದರು. ಬೀಳ್ಕೊಡುಗೆ ಸಮಾರಂಭವನ್ನು ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಸಮಿತಿ ಸದಸ್ಯ ಮೂಸಾ.ಬಿ. ಚೆರ್ಕಳ, ಸೆಕ್ರೆಟರಿಯೇಟ್ ಸದಸ್ಯರಾದ ಟಿ.ಎ. ಸಲೀಂ, ಬೀರು ಪಿ.ಮುಹಮ್ಮದ್, ರಾಜ್ಯ ಪರಿಷತ್ ಸದಸ್ಯ ಅಬ್ದುರಹಿಮಾನ್ ನೆಲ್ಲಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಶಿಹಾಬ್ ಸ್ವಾಗತಿಸಿದರು. ಕೋಶಾಧಿಕಾರಿ ಜಿಯಾದ್ ಪಿ. ವಂದಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಲ ನೇಮಕ ಮಾಡಲಾಯಿತು. ಅಬ್ದುಲ್ ರಹಮಾನ್ ಎ ಅಧ್ಯಕ್ಷ, ಸಾದಿಕ್ ಎಂ, ಶೆಬಿನ್ ಫಾರಿಸ್, ಹಮ್ಜತ್ ಕೆ.ಪಿ, ಸುಬೈದಾ ಉಪಾಧ್ಯಕ್ಷರು, ಓ.ಎಂ. ಶಿಹಾಬ್ ಪ್ರಧಾನ ಕಾರ್ಯದರ್ಶಿ, ಸಿಯಾದ್ ಪಿ. ಕೋಶಾಧಲಿಅರಿ, ಸೈಫುದ್ದೀನ್ ಮಡಕ್ಕಲ್, ಅಶ್ರಫ್ ಚೆರ್ಕಳ, ರಶೀದಾ ಕೆ.ಎ, ಅಶ್ರಫ್ ಕಲ್ಲಿಂಗಲ್ ಜತೆಕರ್ಯದರ್ಶಿಗಳು,





