ನವದೆಹಲಿ: ಕೇರಳ ರಾಷ್ಟ್ರೀಯ ಹೆದ್ದಾರಿ ಕುಸಿತ ಪ್ರಕರಣದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಎಬ್.ಎಚ್.ಎ.ಐ.(ನೇಶನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ) ಸೈಟ್ ಎಂಜಿನಿಯರ್ ಅನ್ನು ವಜಾಗೊಳಿಸಲಾಗಿದೆ ಮತ್ತು ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಲಾಗಿದೆ.
ರಸ್ತೆ ಸುರಕ್ಷತೆಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ನಿವೃತ್ತ ಐಐಟಿ-ದೆಹಲಿ ಪ್ರಾಧ್ಯಾಪಕ ಜಿ.ವಿ. ರಾವ್ ನೇತೃತ್ವದ ಸಮಿತಿಯಲ್ಲಿ ಡಾ. ಅನಿಲ್ ದೀಕ್ಷಿತ್, ಡಾ. ಜಿಮ್ಮಿ ಥಾಮಸ್ ಮತ್ತು ಡಾ. ಕೆ. ಮೋಹನ್ ಕೃಷ್ಣ ಇದ್ದಾರೆ.
ರಸ್ತೆ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡಿರುವ ಸುರಕ್ಷತಾ ಸಲಹೆಗಾರ ಮತ್ತು ವಿನ್ಯಾಸ ಸಲಹೆಗಾರ ಕಂಪನಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಚಿವ ನಿತಿನ್ ಗಡ್ಕರಿ ಅವರು, ಕುರಿಯಾದ್ ಸೇರಿದಂತೆ ಗುತ್ತಿಗೆದಾರರಿಗೆ ಸ್ವಂತ ಖರ್ಚಿನಲ್ಲಿ ನೀರಿನ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸುವಂತೆ ನಿರ್ದೇಶನ ನೀಡಿದ್ದಾರೆ. ಎತ್ತರಿಸಿದ ರಸ್ತೆಯು ರಸ್ತೆಯ ತೂಕವನ್ನು ಬೆಂಬಲಿಸುವ ಅಡಿಪಾಯವನ್ನು ಹೊಂದಿಲ್ಲದಿರುವುದು ರಸ್ತೆ ಕುಸಿತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.



