ಮಲಪ್ಪುರಂ: ಮರಳು ಮಾಫಿಯಾ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಇಬ್ಬರು ಪೋಲೀಸರನ್ನು ಅಮಾನತುಗೊಳಿಸಲಾಗಿದೆ. ಚಂಗರಂಕುಳಂ ಠಾಣೆಯ ಎಸ್‍ಐ ಮತ್ತು ಸಿಪಿಒ ಅವರನ್ನು ತನಿಖೆ ಬಾಕಿ ಇರುವವರೆಗೂ ಅಮಾನತುಗೊಳಿಸಲಾಗಿದೆ.
ಚಂಗರಂಕುಳಂ ಠಾಣೆಯ ಕೆಲವು ಅಧಿಕಾರಿಗಳಿಗೆ ಮರಳು ಮಾಫಿಯಾ ಜೊತೆ ಸಂಪರ್ಕವಿದೆ ಎಂಬ ದೂರುಗಳು ಬಂದಿದ್ದವು. ನಂತರ ಜಿಲ್ಲಾ ಪೋಲೀಸ್ ಮುಖ್ಯಸ್ಥರು ನಡೆಸಿದ ತನಿಖೆಯಲ್ಲಿ ಮಾಫಿಯಾ ಸಂಪರ್ಕ ಪತ್ತೆಯಾಗಿತ್ತು. ಜಿಲ್ಲಾ ಪೋಲೀಸ್ ಮುಖ್ಯಸ್ಥರ ವರದಿಯನ್ನು ಗಣನೆಗೆ ತೆಗೆದುಕೊಂಡು ಡಿಐಜಿ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಇತರ ಪೋಲೀಸ್ ಠಾಣೆಗಳಲ್ಲಿಯೂ ಪೋಲೀಸ್ ಅಧಿಕಾರಿಗಳ ವಿರುದ್ಧ ಇದೇ ರೀತಿಯ ದೂರುಗಳು ದಾಖಲಾಗಿವೆ.





