ಕೀವ್: 'ಇರಾನ್ ನಿರ್ಮಿತ 100ಕ್ಕೂ ಹೆಚ್ಚು 'ಶಹೀದ್' ಡ್ರೋನ್‌ಗಳ ಜೊತೆಗೆ 'ಹುಸಿ' ಡ್ರೋನ್‌ಗಳನ್ನೂ ರಷ್ಯಾವು ನಮ್ಮತ್ತ ಹಾರಿಸಿದೆ' ಎಂದು ಉಕ್ರೇನ್ ಸೇನೆ ಸೋಮವಾರ ಹೇಳಿದೆ. ಸೋಮವಾರದಿಂದ ಆರಂಭವಾಗಿ 30 ದಿನಗಳ ಕದನ ವಿರಾಮ ಘೋಷಿಸುವ ಅಮೆರಿಕ ಹಾಗೂ ಬ್ರಿಟನ್‌ನ ಪ್ರಸ್ತಾವವನ್ನು ತಿರಸ್ಕರಿಸಿದ ರಷ್ಯಾವು ಈ ದಾಳಿ ನಡೆಸಿದೆ.
ದಾಳಿಯ ಬಗ್ಗೆ ರಷ್ಯಾ ಪ್ರತಿಕ್ರಿಯೆ ನೀಡಿಲ್ಲ. 'ಇದೇ ವಾರ ತಮ್ಮೊಂದಿಗೆ ಶಾಂತಿ ಮಾತುಕತೆಗೆ ಟರ್ಕಿಗೆ ಬನ್ನಿ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಸವಾಲು ಎಸೆದಿದ್ದಾರೆ. ಕದನ ವಿರಾಮ ಪ್ರಸ್ತಾವವನ್ನು ತಿರಸ್ಕರಿಸಿದ ರಷ್ಯಾವು, ಉಕ್ರೇನ್‌ನೊಂದಿಗೆ ಗುರುವಾರ ಇಸ್ತಾಂಬುಲ್‌ನಲ್ಲಿ ನೇರವಾಗಿ ಮಾತುಕತೆ ನಡೆಸುವುದಾಗಿ ಹೇಳಿದೆ.
ರಷ್ಯಾವು ತನ್ನೊಂದಿಗೆ ಕರೆದುಕೊಂಡು ಹೋಗಿರುವ ತಮ್ಮ ಸಾವಿರಾರು ಮಕ್ಕಳನ್ನು ವಾಪಸು ಕಳುಹಿಸುವಂತೆ ಒತ್ತಾಯಿಸಲು ಪೋಪ್ 14ನೇ ಲಿಯೊ ಅವರ ಸಹಾಯವನ್ನು ಉಕ್ರೇನ್ ಕೋರಿದೆ. 'ನಮ್ಮ ದೇಶಕ್ಕೆ ಒಮ್ಮೆ ಭೇಟಿ ನೀಡಿ' ಎಂದೂ ಝೆಲೆನ್‌ಸ್ಕಿ ಅವರು ಇದೇ ವೇಳೆ ಪೋಸ್ ಅವರನ್ನು ಕೋರಿಕೊಂಡಿದ್ದಾರೆ.




