ಕಾಸರಗೋಡು: ತಲೆಹೊರೆ ಕಾರ್ಮಿಕರ ಹಿತಕ್ಕೆ ಧಕ್ಕೆಯಾಗುವ ರಿತಿಯ ಧೋರಣೆ ಕೈಗೊಳ್ಳುತ್ತಿರುವ ಎಡರಂಗ ಸರ್ಕಾರ ತನ್ನ ಧೋರಣೆಯಿಂದ ಹಿಂದೆ ಸರಿಯದಿದ್ದಲ್ಲಿ ಬಿಎಂಎಸ್ ಸಂಘಟಿತ ಹೋರಾಟನ್ನೆ ಮುಂದಾಗುವುದಾಗಿ ಬಿಎಂಎಸ್ ರಾಜ್ಯ ಸಮಿತಿ ಕೋಶಾಧಿಕಾರಿ ಸಿ. ಬಾಲಚಂದ್ರನ್ ತಿಳಿಸಿದ್ದಾರೆ.
ಅವರು ಬಿಎಂಎಸ್ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ತಲೆಹೊರೆ ಕಾರ್ಮಿಕರು ಮತ್ತು ಜನರಲ್ ಮಜ್ದೂರ್ ಸಂಘ್(ಬಿಎಂಎಸ್)ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ತಲೆಹೊರೆ ಕಾರ್ಮಿಕರು ಮತ್ತು ಜನರಲ್ ಮಜ್ದೂರ್ ಸಂಘ್ ಜಿಲ್ಲಾಧ್ಯಕ್ಷ ಕೆ.ವಿ ಬಾಬು ಅಧ್ಯಕ್ಷತೆ ವಹಿಸಿದ್ದರು. ಕೇರಳದಲ್ಲಿ ಲಕ್ಷಾಂತರ ತಲೆಹೊರೆ ಕಾರ್ಮಿಕರಿಗೆ ವಂಚನೆಯುಂಟಾಗುತ್ತಿರುವ ಧೋರಣೆಯಿಂದ ಸರ್ಕಾರ ಹಿಂದೆ ಸರಿಯಬೇಕು, '26-ಎ'ಕಾರ್ಡು ಹೊಂದಿರುವ ಕಾಮಿಕರು ನಡೆಸಬೇಕಾದ ಕೆಲಸಗಳನ್ನು ಇತರ ರಾಜ್ಯದ ಕಾರ್ಮಿಕರಿಂದ ಕಡಿಮೆ ವೇತನಕ್ಕೆ ನಡೆಸುತ್ತಿರುವುದರಿಂದ ರಾಜ್ಯದ ಕಾರ್ಮಿಕರಿಗೆ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸಮ್ಮೇಳನದಲ್ಲಿ ಆಗ್ರಹಿಸಲಯಿತು.
ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮುಳ್ಳೇರಿಯಾ, ಗುರುದಾಸ್ ಚೇನಕ್ಕೋಡ್, ಪ್ರದೀಪ್ ಕೇಲೋಟ್, ಹರೀಶ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು. ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ಬಿ.ಸತ್ಯನಾಥ್ ಸಮಾರಾರೋಪ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಸ್ವಾಗತಿಸಿದರು. ರವಿ ವೈ ಬದಿಯಡ್ಕ ವಂದಿಸಿದರು. ಸಭೆಯಲ್ಲಿ 2025 ಮತ್ತು 26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ವಿ. ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ಪಿ ದಿನೇಶ್ ಬಂಬ್ರಾಣ,
ಕೋಶಾಧಿಕಾರಿಯಾಗಿ ದಿಲೀಪ್ ಡಿ'ಸೋಜಾ, ಉಪಾಧ್ಯಕ್ಷರಾಗಿ ಸದಾಶಿವ ಮುಳ್ಳೇರಿಯಾ, ಭಾಸ್ಕರ ಚೆಂಬಿಲೋಡು, ಉಮೇಶ ಮಾನ್ಯ, ರವಿ ಬದಿಯಡ್ಕ, ಜತೆಕರ್ಯದರ್ಶಿಗಳಾಗಿ ತಂಗಚ್ಚನ್ ಪಾಣತ್ತೂರು, ಅನೀಶ್ ಪರಕ್ಲಯಿ, ರಂಜಿತ್ ಕಾಸರಗೋಡು, ಸೂರ್ಯನಾರಾಯಣ ಕುಬಣೂರ್, ಭಾಸ್ಕರ ಪೆÇಯಿನಾಚಿ, ಜಿತಿನ್ ಬಾಬು ನೀಲೇಶ್ವರ ಹಾಗೂ ಇತರ 9 ಮಂದಿಯನ್ನು ಕಾಯ್ಕರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.




