HEALTH TIPS

ಯುಪಿಐ ಮೂಲಕ ಆನ್​ಲೈನ್​ ವಹಿವಾಟು ನಡೆಸುವವರಿಗೆ NPCI ನಿಂದ ಹೊಸ ನಿಯಮ ಜಾರಿ

ಹಣದ ಪಾವತಿಯ ಸಂದರ್ಭದಲ್ಲಿ ಎದುರಿಸುತ್ತಿದ್ದ ಅನೇಕ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಸಂಬಂಧ ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಹೊಸ ವೈಶಿಷ್ಟ್ಯವನ್ನು ಅವರು ಪರಿಚಯ ಮಾಡಿದ್ದಾರೆ.

ಈ ಯೋಜನೆಯು ದೇಶಾದ್ಯಂತ Google Pay, PhonePe, Paytm, ಮತ್ತು BHIM ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಹೊಸ ಮಾರ್ಗಸೂಚಿಯಡಿಯಲ್ಲಿ, ಎಲ್ಲಾ UPI ಅಪ್ಲಿಕೇಶನ್‌ಗಳು ವಹಿವಾಟಿನ ಪೂರ್ವ ವಿವರಗಳ ಪುಟದಲ್ಲಿ ಹಣವನ್ನು ಸ್ವೀಕರಿಸುವ ವ್ಯಕ್ತಿಯ ಹೆಸರು ಮಾತ್ರ ಕಾಣಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ. ಈ ಹೆಸರು ನೇರವಾಗಿ Validate Address API ನಿಂದ ಪಡೆದ ಬ್ಯಾಂಕಿಂಗ್ ಹೆಸರಾಗಿರುತ್ತದೆ. ಅಪ್ಲಿಕೇಶನ್ QR ಕೋಡ್‌ಗಳಿಂದ ಬಂದ ಹೆಸರುಗಳು ಅಥವಾ ಪಾವತಿದಾರರಿಗಾಗಿ ನಮೂದಿಸಬಹುದಾದ ಯಾವುದೇ ಇತರ ಹೆಸರುಗಳನ್ನು ತೋರಿಸುವುದಿಲ್ಲ. ಬದಲಿಗೆ ಗೊಂದಲವನ್ನು ತಪ್ಪಿಸಲು ಬಳಕೆದಾರರ ಅಧಿಕೃತ ಹೆಸರನ್ನು ಮಾತ್ರ ನೋಡಬಹುದಾಗಿದೆ.

ಜೊತೆಗೆ ಬಳಕೆದಾರರು ತಾವು ಹಣ ಕಳುಹಿಸುತ್ತಿರುವ ವ್ಯಕ್ತಿಯ ಹೆಸರನ್ನು ಅಪ್ಲಿಕೇಶನ್‌ನಲ್ಲಿ ಬದಲಾಯಿಸಲು ಯಾವುದೇ ಅವಕಾಶಗಳಿರುವುದಿಲ್ಲ. ನಿಮ್ಮ ಸಂಪರ್ಕ ಸಂಖ್ಯೆಯಲ್ಲಿ ನಮೂದಿಸಿದ ಹೆಸರನ್ನು ಅವಲಂಬಿಸುವ ಬದಲು, ಸ್ವೀಕರಿಸುವವರ ನಿಜವಾದ ಹೆಸರು ಅವರ ಬ್ಯಾಂಕ್ ದಾಖಲೆಗಳಲ್ಲಿರುವಂತೆ ನಿಮಗೆ ಕಾಣುತ್ತದೆ. ಈ ಮೂಲಕ ನೀವು ದೃಢೀಕರಣದ ಬಟನ್ ಅನ್ನು ಒತ್ತುವ ಮೊದಲು, ಹಣವು ಸರಿಯಾದ ವ್ಯಕ್ತಿಗೆ ಹೋಗುತ್ತಿದೆಯೇ ಎಂದು ಪರಿಶೀಲಿಸಬಹುದು.

ಈ ಹೊಸ ನಿಯಮವನ್ನು ಜೂನ್ 30, 2025 ರಿಂದ ಜಾರಿಗೆ ತರಲಾಗುತ್ತದೆ. ಇದು (P2P) ಮತ್ತು (P2PM) ವಹಿವಾಟುಗಳಿಗೆ ಅನ್ವಯಿಸುತ್ತದೆ.
ಖಾತೆದಾರರ ಬಗ್ಗೆ ನಿಖರವಾದ ಮಾಹಿತಿಯನ್ನು UPI ಬಳಕೆದಾರರಿಗೆ ಒದಗಿಸುವುದು, ಅವರ ಹಣದ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಯಾವುದೇ ಗೊಂದಲವನ್ನು ನಿವಾರಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಆನ್‌ಲೈನ್ ಪಾವತಿಯ ಸಮಯದಲ್ಲಿ ನೀವು ತಪ್ಪು ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಿದರೆ, ವಹಿವಾಟನ್ನು ಪ್ರಕ್ರಿಯೆಗೊಳಿಸುವ ಮೊದಲು ನಿಮಗೆ ಎಚ್ಚರಿಕೆ ನೀಡಲಾಗುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries