HEALTH TIPS

Truck Hijack ತಡೆಯಲು ಹೋದ ಪೊಲೀಸ್ ಅಧಿಕಾರಿಯನ್ನೇ ಹೊತ್ತೊಯ್ದ ಚಾಲಕ; ಹೆದ್ದಾರಿಯಲ್ಲಿ ಸಿನಿಮೀಯ ಚೇಸ್

ಚೆನ್ನೈ: ಲಾರಿ ಹೈಜಾಕ್ ಮಾಡಿ ತಡೆಯಲು ಹೋದ ಪೊಲೀಸ್ ಪೇದೆಯನ್ನೇ ಚಾಲಕ ಹೊತ್ತೊಯ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈನ ಚೆಂಗಲ್ಪಟ್ಟು ಟೋಲ್ ಬಳಿ ಈ ಘಟನೆ ನಡೆದಿದ್ದು, ಪೊಲೀಸ್ ಮೂಲಗಳ ಪ್ರಕಾರ ಸರಕು ಸಾಗಣಿಕಾ ಟ್ರಕ್ ನ ಚಾಲಕ ಕೇಳಂಬಕ್ಕಂನ ನಿವಾಸಿ ಅನ್ಬು ಎಂಬಾತ ಚೆಂಗಲ್ಪಟ್ಟು ಟೋಲ್ ಬೂತ್ ಬಳಿ ಭಾರೀ ಲಾರಿಯನ್ನು ನಿಲ್ಲಿಸಿ ತನ್ನ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿಸಲು ಇಳಿದಿದ್ದ. ಬಳಿಕ ಟೀ ಕುಡಿಯಲು ಹೋದಾಗ ಅಪರಿಚಿತ ವ್ಯಕ್ತಿ ಲಾರಿ ಹತ್ತಿ ಅದನ್ನು ಹೈಜಾಕ್ ಮಾಡಿದ್ದಾನೆ.

ಇದರಿಂದ ಆಘಾತಕ್ಕೊಳಗಾದ ಚಾಲಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸಿಂಗಪೆರುಮಾಳ್ ದೇಗುಲ ಮತ್ತು ಮಹೀಂದ್ರಾ ಸಿಟಿಯಲ್ಲಿ ಬೀಡುಬಿಟ್ಟಿದ್ದ ಗಸ್ತು ಘಟಕಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಕದ್ದ ಟ್ರಕ್ ಅನ್ನು ಬೆನ್ನಟ್ಟಿದರು. ಇದಕ್ಕೆ ಸ್ಥಳೀಯರು ಕೂಡ ನೆರವು ನೀಡಿದ್ದಾರೆ.

ಈ ವೇಳೆ ಲಾರಿ ಕೊಂಚ ನಿಧಾನವಾಗುತ್ತಲೇ ಪೊಲೀಸ್ ಅಧಿಕಾರಿ ಮುರುಗನ್ ಎಂಬುವವರು ಸಾಹಸ ಮಾಡಿ ಚಲಿಸುತ್ತಿದ್ದ ಲಾರಿ ಹತ್ತಿದ್ದಾರೆ. ಬಳಿಕ ಲಾರಿ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ ಚಾಲಕ ಲಾರಿ ನಿಲ್ಲಿಸದೇ ರಾಷ್ಟ್ರೀಯ ಹೆದ್ದಾರಿ ಮೂಲಕ ಚೆನ್ನೈ ಕಡೆಗೆ ಲಾರಿಯನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ.

ಪೊಲೀಸ್ ಅಧಿಕಾರಿ ಲಾರಿಯ ಡೋರ್ ನಲ್ಲಿರುವಂತೆಯೇ ಸುಮಾರು 15 ಕಿ.ಮೀ ದೂರದವರೆಗೂ ಲಾರಿ ಚಲಿಸಿಕೊಂಡು ಹೋದ ಚಾಲಕ ಬಳಿಕ ಮರೈಮಲೈ ನಗರ ಸಿಗ್ನಲ್ ಬಳಿ ಪೊಲೀಸ್ ಅಧಿಕಾರಿ ಮುರುಗನ್ ಅವರನ್ನು ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆಸಿ ಅವರನ್ನು ಕೆಳಗೆ ಬೀಳಿಸಲು ಯತ್ನಿಸಿದ್ದಾನೆ. ಆದರೆ ಲಾರಿ ಆತನ ನಿಯಂತ್ರಣ ತಪ್ಪಿ ತಡೆಗೋಡೆಗೆ ಢಿಕ್ಕಿಯಾಗಿ ನಿಂತಿದೆ.

ಬಳಿಕ ಸ್ಥಳೀಯರು ಹಾಗೂ ಪೊಲೀಸರು ಲಾರಿಯೊಳಗಿದ್ದ ಚಾಲಕನನ್ನು ಹಿಡಿಯಸಲು ಯತ್ನಿಸಿದ್ದಾರೆ. ಆದರೆ ಲಾರಿಯೊಳಗಿದ್ದ ಕಳ್ಳ ಅಲ್ಲಿಯೇ ಇದ್ದ ರಾಡ್ ನಿಂದ ಥಳಿಸಲು ಮುಂದಾಗಿದ್ದಾನೆ. ಆದರೆ ಸ್ಥಳೀಯರೆಲ್ಲರೂ ಸೇರಿ ಆತನನ್ನು ಹಿಡಿದು ಥಳಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಇನ್ನು ಸಾಹಸ ಮೆರೆದು ಲಾರಿ ನಿಲಿಸಿದ ಪೊಲೀಸ್ ಅಧಿಕಾರಿ ಮುರುಗನ್ ಅವರನ್ನು ಸ್ಥಳೀಯರು ಸನ್ಮಾನಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries