ಕೊಚ್ಚಿ: ಹೇಮಾ ಸಮಿತಿ ವರದಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತು ಅಂತಿಮ ವರದಿಯನ್ನು 10 ದಿನಗಳಲ್ಲಿ ಹೈಕೋರ್ಟ್‍ಗೆ ಸಲ್ಲಿಸಲಾಗುವುದು.
ಮಲಯಾಳಂ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯಗಳ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಈ ಬಗ್ಗೆ ಹೈÉೂೀರ್ಟ್‍ಗೆ ತಿಳಿಸಿದೆ. ಹೇಮಾ ಸಮಿತಿ ವರದಿಯಲ್ಲಿನ ಟೀಕೆಗಳ ಆಧಾರದ ಮೇಲೆ ದಾಖಲಾದ ಪ್ರಕರಣಗಳನ್ನು ಮುಚ್ಚಲು ತನಿಖಾ ತಂಡ ನಿರ್ಧರಿಸಿದ ನಂತರ ಅಂತಿಮ ವರದಿಯನ್ನು ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೇಮಾ ಸಮಿತಿ ವರದಿಯನ್ನು ಆಧರಿಸಿ ಚಲನಚಿತ್ರ ನೀತಿಯನ್ನು ರೂಪಿಸುವ ಭಾಗವಾಗಿ ಆಗಸ್ಟ್‍ನಲ್ಲಿ ಚಲನಚಿತ್ರ ಸಮಾವೇಶವನ್ನು ಆಯೋಜಿಸುವುದಾಗಿ ರಾಜ್ಯ ಸರ್ಕಾರ ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಸಿ.ಎಸ್.ಸುಧಾ ಅವರ ಪೀಠಕ್ಕೆ ತಿಳಿಸಿದೆ. ಅಕ್ಟೋಬರ್ ವೇಳೆಗೆ ಚಲನಚಿತ್ರ ನೀತಿಯನ್ನು ರೂಪಿಸಲಾಗುವುದು ಮತ್ತು ನಂತರ ಅದಕ್ಕಾಗಿ ಕಾನೂನನ್ನು ರೂಪಿಸಲಾಗುವುದು ಎಂದು ಸರ್ಕಾರ ಹೇಳಿದೆ. ಚಲನಚಿತ್ರ ಕ್ಷೇತ್ರದ ಎಲ್ಲಾ ಸಂಸ್ಥೆಗಳ ಶಿಫಾರಸುಗಳ ಆಧಾರದ ಮೇಲೆ ನೀತಿಯನ್ನು ರೂಪಿಸಲಾಗುವುದು.



