ಕೊಳಕು ಸೋಫಾ ಮನೆಯ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ಡೀಪ್ ಕ್ಲೀನಿಂಗ್ ಅಗತ್ಯವಾಗಿರುತ್ತದೆ. ಹಿಂದೆಲ್ಲಾ ಇದಕ್ಕೆ ಸಂಬಂಧಪಟ್ಟವರನ್ನು ಕರೆಸಿ ಕ್ಲೀನ್ ಮಾಡಲಾಗುತ್ತಿತ್ತು. ಆದರೆ ಈಗದನ್ನು ಮನೆಯಲ್ಲಿಯೇ ಸುಲಭವಾಗಿ ಡ್ರೈ ಕ್ಲೀನ್ ಮಾಡಬಹುದು. ಅದೂ ವೃತ್ತಿಪರರಿಲ್ಲದೆ.
ಲಿವಿಂಗ್ ರೂಮ್ ಇದ್ದಲ್ಲಿ ಸೋಫಾವನ್ನು ಕಾಣಬಹುದು. ಇದು ನೀವು ಕುಳಿತುಕೊಳ್ಳುವ ಪ್ರದೇಶವನ್ನು ಆರಾಮದಾಯಕವಾಗಿಸುವುದು ಮಾತ್ರವಲ್ಲದೆ, ಒಳಾಂಗಣದ ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಆದರೆ ನಿಮ್ಮ ಸೋಫಾ ತುಂಬಾ ಕೊಳಕಾಗಿದ್ದರೆ, ಅದನ್ನು ಡೀಪ್ ಆಗಿ ಸ್ವಚ್ಛಗೊಳಿಸಲು ಯೋಚಿಸುತ್ತಿದ್ದರೆ ಅಥವಾ ಸೋಫಾ ಮೇಲಿನ ಕಲೆಗಳನ್ನು ತೆಗೆದುಹಾಕಲು ಬಯಸಿದರೆ ಡ್ರೈ ಕ್ಲೀನಿಂಗ್ ಇದಕ್ಕೆ ಉತ್ತಮ ಆಯ್ಕೆಯಾಗಿದೆ.
ಸಾಮಾನ್ಯವಾಗಿ ಜನರು ಡ್ರೈ ಕ್ಲೀನಿಂಗ್‌ಗಾಗಿ ಪ್ರೊಫೆಶನಲಿಸ್ಟ್ ಸಹಾಯ ಪಡೆಯುತ್ತಾರೆ. ಆದರೆ ಎಲ್ಲರಿಗೂ ಅವರನ್ನು ಕರೆಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ಹೊಸದಾಗಿ ಹೊಳೆಯುವಂತೆ ಮಾಡಬಹುದು. ಈ ವಿಧಾನವು ಸಮಯವನ್ನು ಉಳಿಸುವುದಲ್ಲದೆ ನಿಮ್ಮ ಹಣವನ್ನು ಸಹ ಉಳಿಸುತ್ತದೆ. ಆದ್ದರಿಂದ ಮನೆಯಲ್ಲಿ ಕೊಳಕು ಸೋಫಾವನ್ನು ಒದ್ದೆಯಾಗದಂತೆ ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಯೋಣ.
ಮೊದಲು ಧೂಳು ತೆಗೆಯಿರಿ
ಮೊದಲನೆಯದಾಗಿ ಸೋಫಾವನ್ನು ಸ್ವಚ್ಛಗೊಳಿಸಲು ಅದರ ಮೇಲೆ ಧೂಳು ತೆಗೆಯಿರಿ. ನಂತರ ಮೂಲೆಗಳಲ್ಲಿ ಮತ್ತು ಆಳದಲ್ಲಿ ಅಡಗಿರುವ ಧೂಳನ್ನು ವ್ಯಾಕ್ಯೂಮ್ ಕ್ಲೀನರ್ ಸಹಾಯದಿಂದ ತೆಗೆದುಹಾಕಿ. ಈ ವಿಧಾನವು ಸಣ್ಣ ಧೂಳಿನ ಕಣಗಳನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.
ಮರದ ಭಾಗಗಳನ್ನು ಸ್ವಚ್ಛಗೊಳಿಸಿ
ಈಗ ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಲಘುವಾಗಿ ಒದ್ದೆ ಮಾಡಿ. ಈಗ ಸೋಫಾದ ಮರದ ಭಾಗಗಳನ್ನು ಚೆನ್ನಾಗಿ ಒರೆಸಿ. ಇದು ಯಾವುದೇ ರೀತಿಯ ಕೊಳಕು ಮತ್ತು ಜಿಗುಟನ್ನು ತೆಗೆದುಹಾಕುತ್ತದೆ.
ಶುಚಿಗೊಳಿಸುವ ದ್ರಾವಣವನ್ನು ತಯಾರಿಸಿ
ಈಗ ಒಂದು ಬಟ್ಟಲಿನಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಫ್ಯಾಬ್ರಿಕ್ ಸಾಫ್ಟ್ನರ್ ಮತ್ತು ಒಂದು ಚಮಚ ಲಿಕ್ವಿಡ್ ಡಿಟರ್ಜೆಂಟ್ ಸೇರಿಸಿ. ಈ ದ್ರಾವಣವು ಸೋಫಾವನ್ನು ಅದರ ಬಟ್ಟೆಗೆ ಹಾನಿಯಾಗದಂತೆ ಆಳವಾಗಿ ಸ್ವಚ್ಛಗೊಳಿಸುತ್ತದೆ.
ಶುಚಿಗೊಳಿಸುವ ವಿಧಾನ
ತಯಾರಿಸಿಟ್ಟುಕೊಂಡ ದ್ರಾವಣದಲ್ಲಿ ಮೈಕ್ರೋಫೈಬರ್ ಬಟ್ಟೆಯನ್ನು ಅದ್ದಿ ಲಘುವಾಗಿ ಹಿಂಡಿ. ಈಗ ಒಂದು ಕ್ಯಾಸರೋಲ್ ಮುಚ್ಚಳ ಅಥವಾ ದೊಡ್ಡ ಮುಚ್ಚಳ ತೆಗೆದುಕೊಂಡು ಅದರ ಸುತ್ತಲೂ ಬಟ್ಟೆಯನ್ನು ಸುತ್ತಿ. ಇಡೀ ಸೋಫಾವನ್ನು ಸ್ವಚ್ಛಗೊಳಿಸಲು ಬಳಸಿ.
ಪದೇ ಪದೇ ಒರೆಸಿ
ಈ ಪ್ರಕ್ರಿಯೆಯನ್ನು ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ. ಸ್ವಲ್ಪ ಸಮಯದಲ್ಲಿ, ನಿಮ್ಮ ಸೋಫಾ ಸ್ವಚ್ಛವಾಗಿ ಮತ್ತು ಹೊಸದಾಗಿ ಹೊಳೆಯಲು ಪ್ರಾರಂಭಿಸುತ್ತದೆ. ಈ ವಿಧಾನವು ಕ್ಲಾಥ್ ಮತ್ತು ಲೆದರ್ ಸೋಫಾ ಎರಡಕ್ಕೂ ಪರಿಣಾಮಕಾರಿಯಾಗಿದೆ.
ಈ ಸರಳ ಪ್ರಕ್ರಿಯೆಯೊಂದಿಗೆ, ನೀವು ಮನೆಯಲ್ಲಿಯೇ ನಿಮ್ಮ ಸೋಫಾವನ್ನು ಡ್ರೈ ಕ್ಲೀನ್ ಮಾಡಬಹುದು. ಅದು ಕೂಡ ಹೆಚ್ಚಿನ ಶ್ರಮ ಮತ್ತು ವೆಚ್ಚವಿಲ್ಲದೆ. ಇಷ್ಟು ಮಾಡಿದರೆ ನಿಮಗೆ ಫ್ರೊಫೆಶನಲಿಸ್ಟ್‌ಗಳ ಅಗತ್ಯವಿರುವುದಿಲ್ಲ ಅಥವಾ ನೀವು ದುಬಾರಿ ಸಾಮಗ್ರಿಗಳನ್ನು ಸಹ ಖರೀದಿಸಬೇಕಾಗಿಲ್ಲ. ಯಾವುದೇ ಡಬ್ಬಿಯ ಮುಚ್ಚಳ ಮತ್ತು ಮೈಕ್ರೋಫೈಬರ್ ಬಟ್ಟೆಯನ್ನು ಬಳಸುವುದರಿಂದ ಸೋಫಾದ ಎಲ್ಲಾ ಧೂಳು ಮತ್ತು ಕೊಳೆಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಇದು ಅಲರ್ಜಿ ಮತ್ತು ಸೋಂಕುಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಈ ವಿಧಾನವು ಬಟ್ಟೆ ಮತ್ತು ಲೆದರ್ ಸೋಫಾಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ಸ್ವಚ್ಛಗೊಳಿಸುತ್ತದೆ. ಇದು ನಿಮ್ಮ ಸೋಫಾವನ್ನು ಹೊಸದಾಗಿ ಕಾಣುವಂತೆ ಮಾಡುತ್ತದೆ ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.




