HEALTH TIPS

ಮರಳಿ ಬರ್ತಿದೆ ನೋಕಿಯಾ 1100, ಚಿಕ್ಕ ಫೋನ್‌ನಲ್ಲಿ ಇರಲಿದೆ DSLR ಪವರ್‌!

ದಿನಗಳು ಕಳೆದ ಹಾಗೆ ಜಗತ್ತಿನಲ್ಲಿ ಮೊಬೈಲ್‌ಫೋನ್‌ನ ಪರಿಭಾಷೆಯೇ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಅದರ ಸ್ಕ್ರೀನ್‌ ದೊಡ್ಡದಾಗುತ್ತಿದೆ. ಹಿಡಿದುಕೊಳ್ಳಲು ಇನ್ನಷ್ಟು ಭಾರವಾಗುತ್ತಿದೆ. ಒಮ್ಮೊಮ್ಮೆ ಇಷ್ಟೆಲ್ಲಾ ಕ್ಲಿಷ್ಟ ಫೋನ್‌ನ ಅಗತ್ಯವೇನು ಅನ್ನೋ ಪ್ರಶ್ನೆ ಕೂಡ ಉದ್ಭವವಾಗುವಂತೆ ಮಾಡಿದೆ.

ಇದರ ಬೆನ್ನಲ್ಲಿಯೇ ನೋಕಿಯಾ ಮತ್ತೆ ಹಳೆ ಕಾಲಕ್ಕೆ ಹೋಗುತ್ತಿದೆ. ನೋಕಿಯಾ ಕಂಪನಿಯ ಇತಿಹಾಸದಲ್ಲಿಯೇ ಗರಿಷ್ಠ ಮಾರಾಟವಾದ ಮೊಬೈಲ್‌ ಎನ್ನುವ ಶ್ರೇಯ ಹೊಂದಿರುವ ನೋಕಿಯಾ 1100 ಅನ್ನು ಮಾರುಕಟ್ಟೆಗೆ ಪರಿಪರಿಚಯಿಸಲು ಸಿದ್ಧವಾಗಿದೆ. ಈ ಬಾರಿ ನೋಕಿಯಾ 1100 ಕೇವಲ ಮೊಬೈಲ್‌ ಮಾತ್ರವೇ ಆಗಿರುವುದಿಲ್ಲ. ಅದು ಚಿಕ್ಕ ಡಿಎಸ್‌ಎಲ್‌ಆರ್‌ ಕ್ಯಾಮೆರಾ ಆಗಿರಲಿದೆ ಎಂದು ಕಂಪನಿ ತಿಳಿಸಿದೆ.

ನೋಕಿಯಾ 2003 ರಲ್ಲಿ ಮೊದಲ ಬಾರಿಗೆ ನೋಕಿಯಾ 1100 ಅನ್ನು ಬಿಡುಗಡೆ ಮಾಡಿದಾಗ, ಅದು ಐಕಾನಿಕ್ ಆಗಿತ್ತು. ಸರಳ, ದೃಢವಾದ ಮತ್ತು ಅಗ್ಗದ ಫೋನ್ ಆಗಿದ್ದು, ಸುರಿಯುವ ಮಳೆಯಲ್ಲಿ ಸರಾಗವಾಗಿ ಕೆಲಸ ಮಾಡುತ್ತಿತ್ತು, ಅದೆಷ್ಟೇ ನೀರಿನಲ್ಲಿ ಒದ್ದೆಯಾದರೂ ಏನೂ ಆಗುತ್ತಿರಲಿಲ್ಲ. ಅದರ ಬ್ಯಾಟರಿಯಂತೂ ಅನಂತ ಕಾಲದವರೆಗೂ ಬರುತ್ತಿತ್ತು.

2025ರಲ್ಲಿ ನೋಕಿಯಾ ಈಗ ಯಾರೂ ಕೂಡ ಯೋಚನೆಯೇ ಮಾಡಲಾಗದ ಅನ್ವೇಷಣೆ ಮಾಡಿದೆ. 1100ಗೆ ಮರುಜೀವ ನೀಡಿದ್ದು 4ಜಿಯಲ್ಲಿ ದೊಡ್ಡ ಟ್ವಿಸ್ಟ್‌ನೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗ, ಇದು ಕೇವಲ ಕರೆಗಳು ಮತ್ತು ಎಸ್‌ಎಂಎಸ್‌ ಬಗ್ಗೆಯಷ್ಟೇ ಅಲ್ಲ, ಇದು ವೃತ್ತಿಪರವಾಗಿ ಜೀವನವನ್ನು ವಿವರವಾಗಿ ಸೆರೆಹಿಡಿಯಲಿದೆ. ಇದು DSLR-ಮಟ್ಟದ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಹೊಂದಿರುವ ವಿಶ್ವದ ಮೊದಲ ಸಣ್ಣ ಗಾತ್ರದ ಫೋನ್ ಎನಿಸಿಕೊಳ್ಳಲಿದೆ.

ಯಾರಿಗಾಗಿ ಈ ನೋಕಿಯಾ 4ಜಿ: ನೋಕಿಯಾ ಕಂಪನಿ ಈ ಫೋನ್‌ ಎಲ್ಲರಿಗಾಗಿಯೂ ಅಲ್ಲ ಎಂದಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಅನಗತ್ಯ ಅಪ್ಲಿಕೇಶನ್‌ಗಳಿಂದ ಮುಕ್ತರಾಗಲು ಬಯಸುವವರಿಗೆ, ಹಗುರವಾದ ಆದರೆ ಶಕ್ತಿಯುತವಾದದ್ದನ್ನು ಬಯಸುವ ಟ್ರಾವೆಲ್‌ ಫೋಟೋಗ್ರಾಫರ್‌ಗಳಿಗೆ ಈ ಫೋನ್‌ ಬೆಸ್ಟ್‌ ಎಂದಿದೆ. ಸಾಲು ಸಾಲು ನೋಟಿಫಿಕೇಶನ್‌ಗಳ ಭಾರವಿಲ್ಲದೆ, ನೆನಪುಗಳನ್ನು ಮಾತ್ರವೇ ಸೆರೆಹಿಡಿಯುವ ಪೋಷಕರಿಗೆ ಇದು ಬೆಸ್ಟ್‌. ತಮ್ಮ ಶರ್ಟ್ ಜೇಬಿನಲ್ಲಿ ಬ್ಯಾಕಪ್ ಕ್ಯಾಮೆರಾವನ್ನು ಬಯಸುವ ವೃತ್ತಿಪರ ಶೂಟರ್‌ಗಳಿಗಾಗಿ ಈ ಫೋನ್‌ ಎಂದು ಹೇಳಿದೆ.

ಪ್ರೀಮಿಯಂ ಲುಕ್ಸ್, ಹಳೆಯ ಕಾಲದ ಮೋಡಿ

ಹೊಸ 1100 ಅನ್ನು ಒಮ್ಮೆ ನೋಡಿದರೆ ಅದು ನಿಮ್ಮ ಸಾಮಾನ್ಯ ಕೀಪ್ಯಾಡ್ ಫೋನ್ ಅಲ್ಲ ಎಂದು ನಿಮಗೆ ತಿಳಿಯುತ್ತದೆ. ನೋಕಿಯಾ ಪ್ಲಾಸ್ಟಿಕ್ ಅನ್ನು ಬಿಟ್ಟು ಬಾಡಿಗೆ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಅನ್ನು ಬಳಸಿದೆ. ಇದು ತುಂಬಾ ಹಗುರವಾಗಿರಲಿದ್ದು, ಕೈಯಲ್ಲಿ ತುಂಬಾ ಸಾಲಿಡ್‌ ಆಗಿರಲಿದೆ.

ಕೀಲಿಗಳು ಬರೀ ರಬ್ಬರ್‌ಗಳಿಂದ ಮಾತ್ರವಲ್ಲ ಅವು ಸೆರಾಮಿಕ್‌ನಿಂದ ಮಾಡಲ್ಪಟ್ಟಿದೆ, ನೀವು ಒತ್ತಿದಾಗಲೆಲ್ಲಾ ತೃಪ್ತಿಕರ ಕ್ಲಿಕ್ ನೀಡುತ್ತದೆ. ನ್ಯಾವಿಗೇಷನ್ ಬಟನ್ ಮೇಲೆ ನೀಲಮಣಿ ಸ್ಫಟಿಕವನ್ನು ಸಹ ಹೊಂದಿದೆ. ಅದು ಐಷಾರಾಮಿ ಕೈಗಡಿಯಾರಗಳಲ್ಲಿ ಬಳಸುವ ರೀತಿಯ ವಸ್ತುವಾಗಿದೆ. ಮತ್ತು ಆ ಹಳೆಯ ಕಾಲದ ಬಣ್ಣಗಳು ಸಹ ಹಿಂತಿರುಗಿವೆ, ಹೆಚ್ಚು ಸಂಸ್ಕರಿಸಲಾಗಿದೆ. ಮಿಡ್‌ನೈಟ್ ಬ್ಲ್ಯಾಕ್, ಆರ್ಕ್ಟಿಕ್ ಸಿಲ್ವರ್ ಮತ್ತು ಸೀಮಿತ ಹೆರಿಟೇಜ್ ಬ್ಲೂ ಆವೃತ್ತಿ ಎಲ್ಲವೂ ಲಭ್ಯವಿದೆ,

ಮೂಲ 1100 ತನ್ನ ಅದ್ಭುತ ಬ್ಯಾಟರಿ ಬಾಳಿಕೆಗೆ ಹೆಸರುವಾಸಿಯಾಗಿತ್ತು, ಆದರೆ ಹೊಸದು ಅದನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. 6000mAh ಬ್ಯಾಟರಿ ಹೊಂದಿರುವ ಹೊಸ ಫೋನ್‌, ನೀವು ಒಂದೇ ಚಾರ್ಜ್‌ನಲ್ಲಿ ನಾಲ್ಕು ವಾರಗಳವರೆಗೆ ನಿಯಮಿತ ಬಳಕೆ ಮಾಡಬಹುದು. ಪ್ರತಿದಿನವೂ ಚಾರ್ಜರ್‌ ಹುಡುಕುವ ಜನರಿಗೆ ಇದು ಬೆಸ್ಟ್‌ ಆಯ್ಕೆ.

ದಿನದ ಪ್ರತಿ ಗಂಟೆ ಕೂಡ ನೀವು ಮಾತನಾಡಿದರೂ ಎರಡು ವಾರಗಳ ಕಾಲ ನಿಸ್ಸಂಶಯವಾಗಿ ಈ ಬ್ಯಾಟರಿ ಬಾಳಿಕೆ ಬರಲಿದೆ. ಯುಎಸ್‌ಬಿ ಸಿ ಮೂಲಕ ಇತರ ಮೊಬೈಲ್‌ಗಳಿಗೆ ಪವರ್‌ ಬ್ಯಾಂಕ್‌ ಆಗಿಯೂ ಕೆಲಸ ಮಾಡಲಿದೆ.

ಸಣ್ಣ ಸ್ಕ್ರೀನ್‌, ದೊಡ್ಡ ಅಚ್ಚರಿ

ಸ್ಮಾರ್ಟ್‌ಫೋನ್‌ಗಳಲ್ಲಿ ಇರುವಂತೆ ದೊಡ್ಡ ಡಿಸ್‌ಪ್ಲೇ ಇದರಲ್ಲಿ ಇರೋದಿಲ್ಲ. 2.8 ಇಂಚಿನ ಸ್ಕ್ರೀನ್‌ ಮಾತ್ರ. ಸೂರ್ಯನ ಬೆಳಕಿನಲ್ಲಿಯೂ ಓದಲು ಸುಲಭವಾಗಿದೆ. ನೀವು ವೀಡಿಯೊಗಳನ್ನು ವೀಕ್ಷಿಸಬಹುದು ಮತ್ತು ಉತ್ತಮ ಗುಣಮಟ್ಟದೊಂದಿಗೆ ಫೋಟೋಗಳನ್ನು ವೀಕ್ಷಿಸಬಹುದು.

ಇದು ಫೀಚರ್ ಫೋನ್ ಆಗಿದ್ದರೂ, ಹೊಸ 1100 ಹಿಂದಿನ ಕಾಲಕ್ಕೆ ಸೀಮಿತವಾಗಿಲ್ಲ. ಇದು ಸ್ಪಷ್ಟ ಕರೆಗಳು ಮತ್ತು ವೇಗದ ಮೂಲ ಇಂಟರ್ನೆಟ್‌ಗಾಗಿ 4G LTE ಅನ್ನು ಬೆಂಬಲಿಸುತ್ತದೆ. ಸಂಪರ್ಕರಹಿತ ಪಾವತಿಗಳಿಗಾಗಿ Wi-Fi, ಬ್ಲೂಟೂತ್ 5.0 ಮತ್ತು NFC ಸಹ ಇದೆ.

ಬೆಲೆ ಎಷ್ಟು?:

ಒಂದು ಅಂದಾಜಿನ ಪ್ರಕಾರ ಇದರ ಬೆಲೆ 199 ಯುಎಸ್‌ ಡಾಲರ್‌ ಅಂದರೆ, 18 ಸಾವಿರ ರೂಪಾಯಿ ಎನ್ನಲಾಗಿದೆ. ಇದು ಫೀಚರ್‌ ಫೋನ್‌ನಷ್ಟು ಅಗ್ಗವಾಗಿಲ್ಲ. ಆದರೆ, ಸ್ಮಾರ್ಟ್‌ಫೋನ್‌ ಗೀಳಿನಿಂದ ಹೊರಬರುವವರಿಗೆ ಇದು ಬೆಸ್ಟ್‌ ಫೋನ್‌.

ಹೊಸ ನೋಕಿಯಾ 1100 ಒಂದು ದಿಟ್ಟ ಫೋನ್‌. ಇದು ಸ್ಮಾರ್ಟ್‌ಫೋನ್ ಕಿಲ್ಲರ್‌ ಆಗುವ ಯೋಚನೆ ಇಲ್ಲ. ಇದು ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ನೀಡಲು ಇಲ್ಲಿದೆ. ಇದರ ಬೃಹತ್ ಬ್ಯಾಟರಿ, ಪ್ರೀಮಿಯಂ ವಸ್ತುಗಳು ಮತ್ತು ಸ್ವಚ್ಛ, ಕೇಂದ್ರೀಕೃತ ಸಾಫ್ಟ್‌ವೇರ್‌ನೊಂದಿಗೆ, ಎಲ್ಲಾ ಗೊಂದಲಗಳಿಲ್ಲದೆ ವಿಶ್ವಾಸಾರ್ಹ ಫೋನ್ ಬಯಸುವ ಜನರಿಗೆ ಇದು ಸೂಕ್ತವಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries